Wednesday, May 22, 2024

ಸಿಎಂ ಬೆಂಗಾವಲು ವಾಹನದಲ್ಲಿ ರೌಡಿಶೀಟರ್..!

ಮಂಡ್ಯ: ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಪ್ರಚಾರ ನಡೆಸಲು ಬಂದ ಸಂದರ್ಭ ಅವರ ಬೆಂಗಾಲು ವಾಹನದಲ್ಲಿ ರೌಡಿಶೀಟರ್​ ಕುಳಿತಿದ್ದ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ ಅವರ ಬೆಂಗಾಲು ವಾಹನದಲ್ಲಿ ರೌಡಿಶೀಟರ್​ ಕುಳಿತಿದ್ದ ವಿಚಾರ ಈಗ ಹಲವು ಸಂಶಯಕ್ಕೆಡೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಪುತ್ರ ನಿಖಿಲ್ ಪರ ಪ್ರಚಾರ ನಡೆಸುತ್ತಿರುವ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪ್ರಚಾರ ನಡೆಸುವ ಸಂದರ್ಭ ರೌಡಿಶೀಟರ್ ಪ್ರಕಾಶ್​​ ಸಿಎಂ ಬೆಂಗಾವಲು ವಾಹನದಲ್ಲಿ ಕುಳಿತಿದ್ದ.

ರೌಡಿಶೀಟರ್​ಗೆ ಸಿಎಂ ಬೆಂಗಾವಲು ಪಡೆ ಪೊಲೀಸರಿಂದಲೇ ರಾಜಾತಿಥ್ಯ ನೀಡಲಾಗ್ತಿದೆಯಾ ಅನ್ನೋ ಪ್ರಶ್ನೆ ಮೂಡಿದ್ದು ಸಿಎಂ ಜೊತೆ ಪ್ರಚಾರಕ್ಕೆ ಆಗಮಿಸಿದ್ದ ಕಿರುಗಾವಲು ಠಾಣೆಯ ರೌಡಿ ಶೀಟರ್ ಪ್ರಕಾಶ್ ಪ್ರಚಾರದ ವೇಳೆ ಸಿಎಂ ವಾಹನದೊಳಗೆ ಕುಳಿತಿದ್ದ. ಇದೀಗ ಸಿಎಂ ಬೆಂಗಾವಲು ವಾಹನದಲ್ಲಿ ರೌಡಿ ಶೀಟರ್​ ಏಕೆ ಬೇಕು ಅನ್ನೋ ಪ್ರಶ್ನೆ ಮೂಡಿದೆ.

RELATED ARTICLES

Related Articles

TRENDING ARTICLES