ನ್ಯೂಯಾರ್ಕ್ : ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹೊಂದಿರೋ ನಾಯಕರ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೇ ನಂಬರ್ 1..! ಮೋದಿ ಅವರ ನಂತರದ ಸ್ಥಾನ, ಅಂದರೆ 2ನೇ ಪ್ಲೇಸ್ ಅಮೆರಿಕಾದ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಅವರಿಗೆ..!
ಗ್ಲೋಬಲ್ ಕಮ್ಯುನಿಕೇಷನ್ ಏಜೆನ್ಸಿ ಬಿಸಿಡಬ್ಲ್ಯು (Burson Cohn & Wolfe) ‘ಫೇಸ್ಬುಕ್ನಲ್ಲಿ 2019ರ ಜಾಗತಿಕ ನಾಯಕರು’ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಮೋದಿ ಫೇಸ್ಬುಕ್ನಲ್ಲಿ 1.37 ಕೋಟಿ ಫಾಲೋವರ್ಸ್ ಹೊಂದಿದ್ದು, 4.35 ಕೋಟಿ ಲೈಕ್ಸ್ ಬಂದಿವೆ. ಇದರೊಂದಿಗೆ ಅವರು ಫೇಸ್ಬುಕ್ನಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿರೋ ವಿಶ್ವದ ನಾಯಕ ಎಂದು ಬಿಸಿಡಬ್ಲ್ಯು ಅಧ್ಯಯನದಿಂದ ಬಹಿರಂಗವಾಗಿದೆ.
ಅದೇರೀತಿ ಜನಪ್ರಿಯತೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2ನೇ ಸ್ಥಾನದಲ್ಲಿದ್ದಾರೆ. ಅವರ ಅಫಿಶಿಯಲ್ ಪೇಜ್ ಅನ್ನು 2.3 ಕೋಟಿ ಲೈಕ್ಸ್ ಬಂದಿವೆ. 3 ನೇ ಸ್ಥಾನದಲ್ಲಿ ವಿಶ್ವದ ಅತಿ ಸುಂದರ ಮಹಾರಾಣಿ ಅನ್ನೋ ಖ್ಯಾತಿಗೆ ಪಾತ್ರರಾಗಿರೋ ಜೋರ್ಡಾನ್ ರಾಣಿ ರಾನಿಯಾ ಇದ್ದಾರೆ. ಅವರ ಪೇಜ್ಗೆ 1.69 ಕೋಟಿ ಲೈಕ್ಸ್ ಇವೆ.
ಇನ್ನು ಹೊಸ ವರ್ಷದ ಮೊದಲ ದಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬ್ರೆಜಿಲ್ನ ಜೇರ್ ಬೊಲ್ಸೊನಾರೂ ಫೇಸ್ಬುಕ್ನಲ್ಲಿ ಹೆಚ್ಚು ಸಕ್ರಿಯವಾಗಿರೋ ಲೀಡರ್ ಅಂತ ಅಧ್ಯಯನದ ವರದಿ ತಿಳಿಸಿದೆ.
ಫೇಸ್ಬುಕ್ನಲ್ಲಿ ಪಿಎಂ ಮೋದಿಯೇ ನಂಬರ್ 1 ..!
TRENDING ARTICLES