Thursday, January 9, 2025

ನಾಳೆ ಯಡಿಯೂರಪ್ಪ ಅಸಲಿ ಡೈರಿ ಬಿಡುಗಡೆ: ವಿನಯ್

ಬೆಂಗಳೂರು: ಯಡಿಯೂರಪ್ಪ ಅವರ ಡೈರಿ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಯಡಿಯೂರಪ್ಪ ಅಸಲಿ ಡೈರಿ ಬಿಡುಗಡೆ ಮಾಡೋದಾಗಿ ವಿನಯ್​ ಹೇಳಿದ್ದಾರೆ. ಈ ಹಿನ್ನೆಲೆ ಅಮೃತಹಳ್ಳಿ ಪೊಲೀಸ್​ ಠಾಣೆಗೆ ಆಗಮಿಸಿ ಭದ್ರತೆ ಒದಗಿಸುವಂತೆ ಕೋರಿದ್ದಾರೆ. ಈ ಹಿಂದೆ ಬಿಜೆಪಿ ಮುಖಂಡ ಕೆ.ಎಸ್​. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿ ವಿನಯ್ ಅವರು ವಕೀಲರೊಂದಿಗೆ ಬಂದು, ಪ್ರಾಣ ಬೆದರಿಕೆ ಇದ್ದು ಗನ್ ಮ್ಯಾನ್ ಒದಗಿಸುವಂತೆ ವಿನಯ್​ ಕೋರಿದ್ದಾರೆ.

2017ರಲ್ಲಿ 11 ಜನರಿಂದ ವಿನಯ್​ ಅಪಹರಣ ಪ್ರಯತ್ನ ನಡೆದಿತ್ತು. ಸೂಕ್ತ ರಕ್ಷಣೆ ಕೋರಿದ ವಿನಯ್ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದಾರೆ. 2017ರಲ್ಲಿ 11 ಜನರಿಂದ ವಿನಯ್ ಅಪಹರಣ ಯತ್ನ ನಡೆದಿತ್ತು. ಇತ್ತೀಚೆಗೆ ವಿನಯ್ ಕಿಡ್ನಾಪ್ ಕೇಸ್​​ ಮತ್ತೆ ಸಿಸಿಬಿಗೆ ವರ್ಗಾವಣೆ ಆಗಿದೆ.

RELATED ARTICLES

Related Articles

TRENDING ARTICLES