ನವದೆಹಲಿ: ಪ್ರಜಾಪ್ರಭುತ್ವದ ಮಹಾ ಹಬ್ಬ ಮುಗಿದಿದೆ. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ 20 ರಾಜ್ಯಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ.65ರಷ್ಟು ಮತದಾರರಿಂದ ಹಕ್ಕು ಚಲಾವಣೆಯಾಗಿದೆ.
ಪ್ರಜಾಪ್ರಭುತ್ವದ ಮಹಾ ಹಬ್ಬವನ್ನ ವಿಜೃಂಭಣೆಯಿಂದಲೇ ಆಚರಿಸಲಾಯ್ತು. 18 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರಿಯೆ ಬಹುಪಾಲು ಶಾಂತಿಯುವಾಗಿ ನಡೆಯಿತು. ಉತ್ತರ ಪ್ರದೇಶದಲ್ಲಿ ಶೇ.59, ಬಿಹಾರದಲ್ಲಿ ಶೇ.50, ಮೇಘಾಲಯದಲ್ಲಿ ಶೇ.62, ಅಂಡಾಮಾನ್ ಮತ್ತು ನಿಕೋಬಾರ್ ನಲ್ಲಿ ಶೇ.70, ಆಂಧ್ರ ಪ್ರದೇಶದಲ್ಲಿ ಶೇ.66, ಛತ್ತೀಸ್ ಗಢದಲ್ಲಿ ಶೇ.56, ತೆಲಂಗಾಣದಲ್ಲಿ ಶೇ.57, ಜಮ್ಮು ಮತ್ತು ಕಾಶ್ಮೀರದಲ್ಲಿ 54, ಮಿಜೋರಾಂನಲ್ಲಿ ಶೇ.60, ನಾಗಾಲ್ಯಾಂಡ್ ನಲ್ಲಿ ಶೇ.73, ಮಣಿಪುರದಲ್ಲಿ ಶೇ.78, ಸಿಕ್ಕಿಂನಲ್ಲಿ ಶೇ.75 ಅಸ್ಸಾಂನಲ್ಲಿ ಶೇ.67 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ.58ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?
ಉತ್ತರ ಪ್ರದೇಶ – ಶೇ.59% ಬಿಹಾರ – ಶೇ.50%
ಮೇಘಾಲಯ – ಶೇ.62% ಅಂಡಮಾನ್ & ನಿಕೋಬಾರ್ – ಶೇ.70%
ಆಂಧ್ರಪ್ರದೇಶ – ಶೇ.66% ಛತ್ತೀಸ್ಗಢ – ಶೇ.56%
ತೆಲಂಗಾಣ – ಶೇ.57% ಜಮ್ಮು & ಕಾಶ್ಮೀರ – ಶೇ.54%
ಒಡಿಶಾ – ಶೇ.66% ಮಿಜೋರಾಂ – ಶೇ.60%
ನಾಗಾಲ್ಯಾಂಡ್ – ಶೇ.73% ಮಣಿಪುರಂ – ಶೇ.78%
ಸಿಕ್ಕಿಂ – ಶೇ.75% ಅಸ್ಸಾಂ – ಶೇ.67%
ಅರುಣಾಚಲ ಪ್ರದೇಶ – ಶೇ.58%
ತ್ರಿಪುರದಲ್ಲಿ ಅತಿ ಹೆಚ್ಚು ಶೇ.81% ಮತದಾನ