ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಗೆ ವೋಟ್ ಹಾಕಿದ್ರೆ ಪಾಕಿಸ್ತಾನಕ್ಕೆ ವೋಟ್ ಹಾಕಿದಂತೆ ಅಂತ ಟ್ವೀಟ್ ಮಾಡಿರೋ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಇಮ್ರಾನ್ ಖಾನ್ ಜೊತೆ ಶಾಮೀಲಾಗಿದ್ದಾರೆ ಅಂತ ಬರೆದಿದ್ದಾರೆ. ಬಿಜೆಪಿ ವಿರುದ್ದ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಇಮ್ರಾನ್ ಖಾನ್ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ರಾಷ್ಟ್ರೀಯತೆ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ” ಅಂತ ಆರೋಪಿಸಿದ್ದಾರೆ.
ನಿನ್ನೆಯಷ್ಟೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾದ್ರೆ ಶಾಂತಿ ಮಾತುಕತೆ ಸುಲಭವಾಗಲಿದೆ ಅಂತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
What's the reason behind @ImranKhanPTI supporting @BJP4India & @narendramodi in the upcoming #LokSabhaElections2019 ?
Looks like Pakistan is supporting BJP to later hurt our Country just like what Russia did to USA.
If you Vote for BJP, You are voting for Pakistan!!
— Siddaramaiah (@siddaramaiah) April 11, 2019