Wednesday, January 22, 2025

ಮತ ಹಬ್ಬಕ್ಕೆ ಅಡ್ಡಿಪಡಿಸಲು ನಕ್ಸಲರ ಹೀನ ಕೃತ್ಯ

ರಾಯ್​ಪುರ: ಛತ್ತೀಸ್​ಗಢದ ನಾರಾಯಣಪುರ ಎಂಬಲ್ಲಿ ಐಇಡಿ ಬಾಂಬ್​ ಬ್ಲಾಸ್ಟ್ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ದೇಶದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಮತದಾನಕ್ಕೆ ಅಡ್ಡಿಪಡಿಸಲು ನಕ್ಸಲರು ಬಾಂಬ್​ ಬ್ಲಾಸ್ಟ್​ ನಡೆಸಿದ್ದಾರೆ. ನಕ್ಸಲ್​ ಪೀಡಿತ ಬಸ್ತಾರ್​ ಲೋಕಸಭಾ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ನಕ್ಸಲರು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಬಸ್ತಾರ್ ಲೋಕಸಭಾ ವ್ಯಾಪ್ತಿಯಲ್ಲಿ ಇರುವ ನಾರಾಯಣಪುರದಲ್ಲಿ ಬಾಂಬ್​ ಬ್ಲಾಸ್ಟ್ ನಡೆದಿದ್ದು, ನಕ್ಸಲ್​ ಬೆದರಿಕೆ ಹೊರತಾಗಿಯೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗಿಯಾಗುತ್ತಿದ್ದಾರೆ.

RELATED ARTICLES

Related Articles

TRENDING ARTICLES