ಶಿವಮೊಗ್ಗ : ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ಕುಮಾರ್ ಅವರ ವಿರುದ್ಧ ಅವರ ಬಾವ, ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಫುಲ್ ಗರಂ ಆಗಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ”ಶಿವರಾಜ್ಕುಮಾರ್ ಅವರು ತಮ್ಮ ‘ಕವಚ’ ಸಿನಿಮಾದ ಪ್ರಚಾರದ ಹೆಸರಿನಲ್ಲಿ ರಾಜಕೀಯ ಮಾಡಲು ಶಿವಮೊಗ್ಗಕ್ಕೆ ಬಂದಿದ್ದಾರೆ. ಅವರಿಗೆ ರಾಜಕೀಯ ಮಾಡುವ ಆಸೆಯಿದ್ದರೆ ಧರಿಸಿರೋ ಕವಚ ತೆಗೆದಿಟ್ಟು ರಾಜಕೀಯ ಮಾಡಲಿ. ಅದು ಬಿಟ್ಟು ಸಿನಿಮಾವನ್ನು ಮುಂದಿಟ್ಟುಕೊಂಡು ಅದರ ಪ್ರಚಾರ ಮಾಡ್ತೀನಿ ಅಂತ ಬಂದು ರಾಜಕೀಯ ಪ್ರಚಾರ ಮಾಡೋದು ಬೇಡ ಅಂತ” ಕಿಡಿಕಾರಿದರು.
ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ಗೀತಾ ಮತ್ತು ಶಿವರಾಜ್ಕುಮಾರ್ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಅವರು ಇಲ್ಲಿ ಕಾಣಿಸಲ್ಲ. ಇದೀಗ ಅವರು ಮಧು ಬಂಗಾರಪ್ಪ ಅವರ ಪರ ಪ್ರಚಾರಕ್ಕೆ ಬಂದಿದ್ದಾರೆ. 5 ವರ್ಷದ ಬಳಿಕ ಇದೀಗ ಶಿವಮೊಗ್ಗ ಅವರಿಗೆ ನೆನಪು ಬಂದಿದೆ. ಈ ವರ್ತನೆ ಶಿವರಾಜ್ ಕುಮಾರ್ ಹಾಗೂ ನನ್ನ ತಂಗಿ ಗೀತಾ ಅವರಿಗೆ ಶೋಭೆ ತರುವಂತಹದ್ದಲ್ಲ. ಅವರಿಗೆ ರಾಜಕೀಯ ಮಾಡುವ ಆಸೆ ಇದ್ದರೆ ಧರಿಸಿರುವ ಕವಚ ತೆಗೆದಿಟ್ಟು ರಾಜಕೀಯ ಮಾಡಲಿ. ಅದು ಬಿಟ್ಟು ಚಿತ್ರವನ್ನು ಮುಂದಿಟ್ಟುಕೊಂಡು ಅದರ ಪ್ರಚಾರ ಮಾಡುತ್ತೇನೆಂದು ರಾಜಕೀಯ ಪ್ರಚಾರ ಮಾಡುವುದು ಸರಿಯಲ್ಲ ಅಂತ ಟೀಕಿಸಿದರು.
ರಾಜಕುಮಾರ್ ಕುಟುಂಬ ರಾಜಕೀಯದಲ್ಲಿ ಇಲ್ಲ ಅಂತ ಹೇಳ್ತಾರೆ. ಆದರೆ, ಇಲ್ಲಿ ಪ್ರಚಾರಕ್ಕೆ ಬರ್ತಾರೆ. ರಾಜಕೀಯದಲ್ಲಿ ದ್ವೇಷ ಇಟ್ಟುಕೊಂಡು ಮಾತನಾಡಬಾರದು ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಒಮ್ಮೆ ಮಂಡ್ಯಕ್ಕೆ ಹೋಗಿ ಅಲ್ಲಿನ ರಾಜಕೀಯ ನೋಡಲಿ. ಆಗ ಯಾರು ದ್ವೇಷ ಮಾಡುತ್ತಿದ್ದಾರೆ ಎಂಬುದು ಶಿವರಾಜ್ ಕುಮಾರ್ಗೆ ಅರಿವಾಗುತ್ತದೆ. ಹಿಂಬದಿಯಲ್ಲಿ ಕಾಂಗ್ರೆಸ್ನ್ನು ನಿಲ್ಲಿಸಿಕೊಂಡು ಮುಂದೆ ಕವಚ ಇಟ್ಟುಕೊಂಡು ಮಾತನಾಡುವುದು ಸರಿಯಲ್ಲ ಅಂತ ಶಿವರಾಜ್ ಕುಮಾರ್ ವಿರುದ್ಧ ಕುಮಾರ್ ಬಂಗಾರಪ್ಪ ಹರಿಹಾಯ್ದರು.
ರಾಜಕೀಯ ಮಾಡುವುದಾದ್ರೆ ‘ಕವಚ’ ತೆಗೆದಿಟ್ಟು ಬರಲಿ : ಶಿವಣ್ಣ ವಿರುದ್ಧ ಬಾವ ಕುಮಾರ್ ಕಿಡಿ..!
TRENDING ARTICLES