ಮಂಡ್ಯ : ದೇಶದ ಗಮನಸೆಳೆದಿರೋ ಮಂಡ್ಯ ರಣಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ರಾಕಿಂಗ್ ಸ್ಟಾರ್ ಯಶ್ ಇಂದೂ ಕೂಡ ಪ್ರಚಾರ ಮುಂದುವರೆಸಿದ್ದಾರೆ. ಯಶ್ ಪ್ರಚಾರದ ವೇಳೆ ‘ಕ್ರಮಸಂಖ್ಯೆ 20, ಕುಮಾರಣ್ಣಂಗೆ ಆಪತ್ತು’ ಅನ್ನೋ ಘೋಷಣೆಯನ್ನು ಅಭಿಮಾನಿಗಳು ಕೂಗಿದ್ರು.
ಪ್ರಚಾರದ ವೇಳೆ ಮಾತನಾಡಿದ ಯಶ್, ”ನಾಲ್ವರು ಸುಮಲತಾರನ್ನ ಯಾಕೆ ನಿಲ್ಲಿಸಿದ್ದಾರೆ. 4 ಸುಮಲತಾ ಹೆಸರಿರುವವರನ್ನು ನಿಲ್ಲಿಸಿದ್ದಾರೆ. ನಿಮಗೆ ಗೊತ್ತು ಕನ್ಫ್ಯೂಸ್ ಆಗ್ಬೇಡಿ.. ಕನ್ಫ್ಯೂಸ್ ಆಗ್ಬೇಡಿ. ನಂಗೊತ್ತು ನೀವ್ ಕನ್ಫ್ಯೂಸ್ ಆಗಲ್ಲ. ಕನ್ಫ್ಯೂಸ್ ಆಗೋಕೆ ಇಲ್ಯಾರು ದಡ್ಡರಿಲ್ಲ. ಕ್ರಮಸಂಖ್ಯೆ 20ಕ್ಕೆ ಮತ ನೀಡಿ” ಎಂದು ಯಶ್ ಮನವಿ ಮಾಡಿದ್ರು.
ಯಶ್ ಕ್ರಮಸಂಖ್ಯೆ 20 ಅಂದಾಗ ಅಭಿಮಾನಿಗಳು ಕುಮಾರಣ್ಣನಿಗೆ ಆಪತ್ತು ಎಂದು ಘೋಷಣೆ ಕೂಗಿದರು. ಆಗ ಯಶ್ ಹಾಗೆಲ್ಲಾ ಹೇಳೋದು ಬೇಡ ಎಂದರು.
ಕ್ರಮ ಸಂಖ್ಯೆ 20 -ಕುಮಾರಣ್ಣಗೆ ಆಪತ್ತು : ಯಶ್ ಪ್ರಚಾರದ ವೇಳೆ ಅಭಿಮಾನಿಗಳ ಘೋಷಣೆ..!
TRENDING ARTICLES