Thursday, December 26, 2024

ದರ್ಶನ್​, ಸುದೀಪ್​, ಪುನೀತ್​ ಯಾರು ಅಂತ ಕೇಳಿದ್ರು ಜಗ್ಗೇಶ್..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪವರ್​ ಸ್ಟಾರ್ ಪುನೀತ್ ರಾಜ್​​ಕುಮಾರ್​ ಈ ಮೂವರು ಸ್ಟಾರ್​ ನಟರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಗೊತ್ತಿರೋ ಕನ್ನಡದ ಕಣ್ಮಣಿಗಳು ಆದರೆ, ಇವರನ್ನೇ ನವರಸ ನಾಯಕ ಜಗ್ಗೇಶ್ ಯಾರು ಅಂತ ಪ್ರಶ್ನೆ ಮಾಡಿದ್ದಾರೆ..!
ಅರೆ, ಸುದೀಪ್, ದರ್ಶನ್, ಯಶ್ ಯಾರು ಅಂತ ಜಗ್ಗೇಶ್ ಕೇಳಿದ್ರಾ? ಹೌದು ಅಚ್ಚರಿಯಾದ್ರೂ ಇದು ಸತ್ಯ..! ಆದರೆ, ಜಗ್ಗೇಶ್ ಕೋಪದಿಂದ ಕೇಳಿದ್ದಲ್ಲ, ರಿಯಲ್​ ಆಗಿ ಪ್ರಶ್ನಿಸಿದ್ದಲ್ಲ..! ಬದಲಾಗಿ ಸಿನಿಮಾದಲ್ಲಿ..!
ಹೌದು, ‘ಪ್ರೀಮಿಯರ್ ಪದ್ಮಿನಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನಲ್ಲಿನ ಡೈಲಾಗ್ ಗಳು ಗಮನ ಸೆಳೆದಿವೆ. ಟ್ರೇಲರ್ ನಲ್ಲಿ ಬರುವ ಒಂದು ಕಾಮಿಡಿ ಡೈಲಾಗ್ ನಲ್ಲಿ ”ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಅವರ ಹಾಡು ನೀವು ಕೇಳುವುದಿಲ್ವಾ ಎಂದು ಡ್ರೈವರ್​ ಕೇಳಿದಾಗ, ಜಗ್ಗೇಶ್ ಇವರೆಲ್ಲಾ ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
‘ಪ್ರೀಮಿಯರ್ ಪದ್ಮಿನಿ’ ರಮೇಶ್ ಇಂದಿರಾ ಆ್ಯಕ್ಷನ್ ಕಟ್​ ಹೇಳಿರೋ ಚಿತ್ರ. ಶ್ರುತಿ ನಾಯ್ಡು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಅರ್ಜುನ್​ ಜನ್ಯ ಸಂಗೀತದ ಬಲ ತುಂಬಿದ್ದಾರೆ.

RELATED ARTICLES

Related Articles

TRENDING ARTICLES