ಮೈಸೂರು: ಸುಪ್ರೀಂಕೋರ್ಟ್‌ನಲ್ಲಿ ಶಬರಿಮಲೆ ವಿಚಾರ ಬಂದಾಗ ಕಮ್ಯುನಿಷ್ಟರು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಲಾಠಿಚಾರ್ಜ್ ಮಾಡಿಸಿದ್ರು. ಕಾಂಗ್ರೆಸ್‌ನ ನಾಮದಾರ್ ಕೇರಳದಲ್ಲಿ ಚುನಾವಣೆಗೆ ನಿಂತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರ ರಾಜಕೀಯ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ. ಇವರನ್ನ ಉಜ್ವಲ ಭವಿಷ್ಯ ನಿರೀಕ್ಷಿಸಲು ಸಾಧ್ಯವಾ? ಅಂತ ಪ್ರಧಾನಿ ಮೋದಿ ಪ್ರಶ್ನಿಸಿದ್ರು.
ಅರಮನೆ ನಗರಿ ಮೈಸೂರಿನಲ್ಲಿ ಮಾತನಾಡಿದ ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿ, ಮೊದಲಿಗೆ ಚಾಮುಂಡೇಶ್ವರಿ, ವಿಶ್ವೇಶ್ವರಯ್ಯರನ್ನ ಸ್ಮರಿಸಿದರು. ನಂತರ ಮಾತನಾಡಿ “ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಜನರನ್ನ ವಂಚಿಸುತ್ತಿವೆ. ಕರ್ನಾಟಕ ಸರ್ಕಾರ ರೈತರ ಸಾಲ ಮನ್ನಾ ಮಾಡದೇ ನೋಟಿಸ್ ನೀಡುತ್ತಿದೆ. ಕರ್ನಾಟಕದಲ್ಲಿ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ದೇವೇಗೌಡರನ್ನ ಸೋನಿಯಾಗಾಂಧಿ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸಿದ್ರು. ಆದ್ರೆ, ರಾಹುಲ್ ಗಾಂಧಿ ಕೇರಳಕ್ಕೆ ಹೋಗಿ ಚುನಾವಣೆಗೆ ನಿಂತಿದ್ದಾರೆ” ಎಂದಿದ್ದಾರೆ.
“ಮೈಸೂರಿನಲ್ಲಿ ಪಾಸ್‌ಪೋರ್ಟ್ ಕೇಂದ್ರ ಸ್ಥಾಪಿಸಿದ್ದೇವೆ. ಕಳೆದ 5 ವರ್ಷದಿಂದ ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಜಪಿಸುತ್ತಿದ್ದೇವೆ. ಐದು ವರ್ಷದಲ್ಲಿ ಭಾರತದಲ್ಲಿ ಏರ್‌ಪೋರ್ಟ್‌ಗಳನ್ನ ದ್ವಿಗುಣ ಮಾಡುತ್ತೇವೆ. 5 ವರ್ಷದಲ್ಲಿ ಭಾರತದಲ್ಲಿ ವೈದ್ಯರ ಸಂಖ್ಯೆ ಡಬಲ್ ಮಾಡುತ್ತೇವೆ. 2030ರೊಳಗೆ ಭಾರತ ಜಗತ್ತಿನ ಮೂರನೇ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ” ಅಂತ ಪ್ರಧಾನಿ ಮೋದಿ ಹೇಳಿದ್ರು.
“ದೇಶದಲ್ಲಿ ಕಾಂಗ್ರೆಸ್ ಹಟಾವೋ ಆದ್ರೆ ಬಡತನ ತಾನಾಗೇ ಹೋಗುತ್ತೆ. ಹೊಸ ಉದ್ಯಮ ಸ್ಥಾಪಿಸುವರಿಗೆ 50ಲಕ್ಷ ಶೂನ್ಯ ಬಡ್ಡಿದರದಲ್ಲಿ ಸಾಲ, ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಸಾಲ, ಕಾಂಗ್ರೆಸ್ ಸರ್ಕಾರ ದೇಶಕ್ಕೆ 2ಜಿ ಹಗರಣ ನೀಡಿತು. ಆದ್ರೆ, ನಮ್ಮ ಸರ್ಕಾರ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್, ಡಾಟಾ ನೀಡಿದೆ” ಎಂದರು.