Friday, September 13, 2024

ಸುಮಲತಾ ಅಕ್ಕ ಸುಳ್ಳು ಹೇಳೋದನ್ನು ಕಡಿಮೆ ಮಾಡ್ಬೇಕು : ಸಿ.ಎಸ್​​ ಪುಟ್ಟರಾಜು

ಮಂಡ್ಯ : ಸುಮಲತಾ ಅಕ್ಕ ಸುಳ್ಳು ಹೇಳೋದನ್ನು ಬಿಡಬೇಕು ಅಂತ ಸಚಿವ ಸಿ.ಎಸ್​ ಪುಟ್ಟರಾಜು ಅವರು ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ತಿರುಗೇಟು ನೀಡಿದ್ದಾರೆ.
‘ಅಂಬರೀಶ್​ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತಾಡಿದ್ರೆ ಫಾರಿನ್ ಟ್ರಿಪ್ ಆಫರ್ ನೀಡಿದ್ದಾರೆ’ ಅನ್ನೋ ಸುಮಲತಾ ಅಂಬರೀಶ್ ಅವರ ಆರೋಪಕ್ಕೆ ಸಂಬಂಧಪಟ್ಟಂತೆ ತಿರುಗೇಟು ನೀಡಿದ ಸಿ.ಎಸ್​ ಪುಟ್ಟರಾಜು, ”ಆ ರೀತಿ ಮಾಡುವ ದುರ್ಗತಿ ನಮಗೆ ಬಂದಿಲ್ಲ. ಸುಮಲತಾ ಅಕ್ಕ ಸುಳ್ಳು ಹೇಳೋದನ್ನ ಕಡಿಮೆ ಮಾಡ್ಬೇಕು. ಏಪ್ರಿಲ್ 18ಕ್ಕೆ ಜನರೇ ತೀರ್ಮಾನ ಮಾಡುತ್ತಾರೆ. ಪಾಪ ಸುಮಲತಾ ಅವರಿಗೆ ರಾಜಕಾರಣವೇ ಗೊತ್ತಿಲ್ಲ. 60 ವರ್ಷದಿಂದ ರಾಜಕಾರಣ ಮಾಡಿದವರೇ ಕೈಕಟ್ಟಿ ನಿಲ್ಲಬೇಕು. ಆ ಮಟ್ಟಿಗೆ ಮಾರ್ಗದರ್ಶನ ಪಡೆದಿದ್ದಾರೆ” ಎಂದರು.

RELATED ARTICLES

Related Articles

TRENDING ARTICLES