ಮಂಡ್ಯ : ಸುಮಲತಾ ಅಕ್ಕ ಸುಳ್ಳು ಹೇಳೋದನ್ನು ಬಿಡಬೇಕು ಅಂತ ಸಚಿವ ಸಿ.ಎಸ್ ಪುಟ್ಟರಾಜು ಅವರು ಮಂಡ್ಯ ರಣಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ತಿರುಗೇಟು ನೀಡಿದ್ದಾರೆ.
‘ಅಂಬರೀಶ್ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತಾಡಿದ್ರೆ ಫಾರಿನ್ ಟ್ರಿಪ್ ಆಫರ್ ನೀಡಿದ್ದಾರೆ’ ಅನ್ನೋ ಸುಮಲತಾ ಅಂಬರೀಶ್ ಅವರ ಆರೋಪಕ್ಕೆ ಸಂಬಂಧಪಟ್ಟಂತೆ ತಿರುಗೇಟು ನೀಡಿದ ಸಿ.ಎಸ್ ಪುಟ್ಟರಾಜು, ”ಆ ರೀತಿ ಮಾಡುವ ದುರ್ಗತಿ ನಮಗೆ ಬಂದಿಲ್ಲ. ಸುಮಲತಾ ಅಕ್ಕ ಸುಳ್ಳು ಹೇಳೋದನ್ನ ಕಡಿಮೆ ಮಾಡ್ಬೇಕು. ಏಪ್ರಿಲ್ 18ಕ್ಕೆ ಜನರೇ ತೀರ್ಮಾನ ಮಾಡುತ್ತಾರೆ. ಪಾಪ ಸುಮಲತಾ ಅವರಿಗೆ ರಾಜಕಾರಣವೇ ಗೊತ್ತಿಲ್ಲ. 60 ವರ್ಷದಿಂದ ರಾಜಕಾರಣ ಮಾಡಿದವರೇ ಕೈಕಟ್ಟಿ ನಿಲ್ಲಬೇಕು. ಆ ಮಟ್ಟಿಗೆ ಮಾರ್ಗದರ್ಶನ ಪಡೆದಿದ್ದಾರೆ” ಎಂದರು.
ಸುಮಲತಾ ಅಕ್ಕ ಸುಳ್ಳು ಹೇಳೋದನ್ನು ಕಡಿಮೆ ಮಾಡ್ಬೇಕು : ಸಿ.ಎಸ್ ಪುಟ್ಟರಾಜು
TRENDING ARTICLES