Tuesday, October 15, 2024

‘ವರ್ಲ್ಡ್​​​​ಕಪ್​​ಗೆ ವಿರಾಟ್​ ಬದಲು ರೋಹಿತ್ ಕ್ಯಾಪ್ಟನ್​ ಆಗಲಿ’ ..!

ಒಡಿಐ ವರ್ಲ್ಡ್​​ಕಪ್​ಗೆ ವಿರಾಟ್​ ಕೊಹ್ಲಿ ಅವರ ಬದಲು ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಕ್ಯಾಪ್ಟನ್ ಆಗಲಿ ಅನ್ನೋ ಕೂಗು ಬಲವಾಗಿ ಕೇಳಿ ಬರ್ತಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ಪ್ರಸಕ್ತ ಸಾಲಿನ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇದೆ. ಅದರಲ್ಲೂ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ದ ಕೇವಲ 136ರನ್​ ಗಳಿಸಿದ್ದರೂ ಆ ಸ್ಕೋರ್ ಅನ್ನು ಡಿಫೈನ್ ಮಾಡಿಕೊಂಡು ಮುಂಬೈ ಗೆಲುವಿನ ಕೇಕೆ ಹಾಕಿತ್ತು.
ಇತ್ತ ವಿರಾಟ್​ ಕೊಹ್ಲಿ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಳಪೆ ಪ್ರದರ್ಶನವನ್ನೇ ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಆಡಿರೋ ಎಲ್ಲಾ 6 ಮ್ಯಾಚ್​ಗಳಲ್ಲೂ ವಿರಾಟ್​ ಪಡೆ ಸೋಲನುಭವಿಸಿದೆ. ಆದ್ದರಿಂದ ಟ್ವಿಟ್ಟಗರು ವರ್ಲ್ಡ್​ಕಪ್​ಗೆ ವಿರಾಟ್​ ಬದಲು ರೋಹಿತ್​ ಶರ್ಮಾ ಅವರನ್ನೇ ನಾಯಕನನ್ನಾಗಿ ಮಾಡಿ ಅಂತ ಒತ್ತಾಯಿಸುತ್ತಿದ್ದಾರೆ.
‘ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಅನ್ನೋದು ರೋಹಿತ್ ಶರ್ಮಾಗೆ ಚೆನ್ನಾಗಿ ಗೊತ್ತಿದೆ. ವರ್ಲ್ಡ್​ಕಪ್​ಗೆ ಅವರನ್ನೇ ನಾಯಕನನ್ನಾಗಿ ಮಾಡಿ’ ಅಂತ ಕೆಲವು ಟ್ವಿಟ್ಟಿಗರು ಬಿಸಿಸಿಐಯನ್ನು ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES