Wednesday, April 24, 2024

ಗ್ರೌಂಡ್​​ ರಿಪೋರ್ಟ್ : ‘ಬಹಮನಿ’ ರಣಕಣದಲ್ಲಿ ಖೂಬ-ಖಂಡ್ರೆ ಲೋಕ ಸಮರ

ಗ್ರೌಂಡ್​​ ರಿಪೋರ್ಟ್​ 17 : ಬೀದರ್​ ಲೋಕಸಭಾ ಕ್ಷೇತ್ರ

ಬೀದರ್​ : ‘ಬಹುಮನಿ’ ಸಾಮ್ರಾಜದ್ಯದ ರಣಕಣ, ಬಸವಾದಿ ಶರಣರ ನಾಡು ಬೀದರ್ ಲೋಕಸಭಾ ಕ್ಷೇತ್ರ ಹಾಲಿ ಸಂಸದ ಭಗವಂತ್​ ಖೂಬಾ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್​ ಖಂಡ್ರೆ ಅವರ ನಡುವಿನ ಜಿದ್ದಾಜಿದ್ದಿನ ಫೈಟ್​ಗೆ ಸಾಕ್ಷಿಯಾಗಿದೆ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕಡೆಗಳಲ್ಲಿ ಕಾಂಗ್ರೆಸ್​ ಶಾಸಕರು, 2 ಕಡೆಗಳಲ್ಲಿ ಬಿಜೆಪಿ, 1 ಕಡೆ ಜೆಡಿಎಸ್​​ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಬೀದರ್ ಉತ್ತರ ಕಾಂಗ್ರೆಸ್ ರಹೀಂ ಖಾನ್
ಬೀದರ್ ದಕ್ಷಿಣ ಜೆಡಿಎಸ್ ಬಂಡೆಪ್ಪ ಕಾಂಶೆಂಪುರ್
ಔರಾದ್ ಬಿಜೆಪಿ ಪ್ರಭು ಚವ್ಹಾಣ್
ಬಸವಕಲ್ಯಾಣ ಕಾಂಗ್ರೆಸ್ ನಾರಾಯಣ್ ರಾವ್
ಹುಮ್ನಾಬಾದ್ ಕಾಂಗ್ರೆಸ್ ರಾಜಶೇಖರ್ ಪಾಟೀಲ್
ಭಾಲ್ಕಿ ಕಾಂಗ್ರೆಸ್ ಈಶ್ವರ್ ಖಂಡ್ರೆ
ಅಳಂದ ಬಿಜೆಪಿ ಸುಭಾಷ್ ಗುತ್ತೇದಾರ್ (ಕಲಬುರಗಿ)
ಚಿಂಚೊಳ್ಳಿ ಕಾಂಗ್ರೆಸ್ ಉಮೇಶ್ ಜಾಧವ್ (ಕಲಬುರಗಿ)

2014ರ ಲೋಕ ಸಮರ : ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ಅವರು ಕಾಂಗ್ರೆಸ್​ನ ಧರಂಸಿಂಗ್​ ಅವರ ವಿರುದ್ಧ 92,222 ಮತಗಳ ಅಂತರದ ಗೆಲುವು ಪಡೆದಿದ್ದರು. ಭಗವಂತ ಖೂಬಾ ಅವರಿಗೆ 4,59,290, ಧರಂಸಿಂಗ್ ಅವರಿಗೆ 3,67,068 ಮತಗಳು ಬಂದಿದ್ದವು. ಜೆಡಿಎಸ್​ನ ಬಂಡೆಪ್ಪ ಕಾಶೆಂಪುರ್ 58,728 ಮತಗಳನ್ನು ಪಡೆದಿದ್ದರು.

ಲೋಕಸಭಾ ಚುನಾವಣೆಯ ಇತಿಹಾಸವನ್ನು ನೋಡಿದ್ರೆ, ಇದುವರೆ ಕಾಂಗ್ರೆಸ್​ 10 ಬಾರಿ, ಬಿಜೆಪಿ 6 ಬಾರಿ ಗೆಲುವಿನ ನಗೆಬೀರಿವೆ.
1951 : ಶಕುಂತಲಾ ಶಾ ಅನ್ಸಾರಿ, ಕಾಂಗ್ರೆಸ್
1962, 67 : ರಾಮಚಂದ್ರ ವೀರಪ್ಪ, ಕಾಂಗ್ರೆಸ್
1971, 1977 : ಶಂಕರ್​ ದೇವ್​ ಬಾಲಾಜಿ ರಾವ್​, ಕಾಂಗ್ರೆಸ್
1980, 1984, 1989 : ನರಸಿಂಗರಾವ್​ ಸೂರ್ಯವಂಶಿ, ಕಾಂಗ್ರೆಸ್
1991, 1998, 1999, 2004 : ರಾಮಚಂದ್ರ ವೀರಪ್ಪ, ಬಿಜೆಪಿ
2004 : ನರಸಿಂಗರಾವ್​ ಸೂರ್ಯವಂಶಿ, ಕಾಂಗ್ರೆಸ್ (ಉಪ ಚುನಾವಣೆ)
2009 : ಧರಂಸಿಂಗ್​, ಕಾಂಗ್ರೆಸ್
2014 : ಭಗವಂತ್ ಖೂಬಾ, ಬಿಜೆಪಿ

‘ಮತ’ ಗಣಿತ
ಪುರುಷರು 9,07,293
ಮಹಿಳೆಯರು 8,43,077
ಒಟ್ಟು 17,50,370

ಜಾತಿ ಗಣಿತ
ಲಿಂಗಾಯತರು – 4,38,600
ಎಸ್ಸಿ 4,37,592
ಎಸ್ಟಿ 4,55,096
ಅಲ್ಪಸಂಖ್ಯಾತರು 2,97,562
ಇತರೆ 1,22,525

ಅಭ್ಯರ್ಥಿಗಳ ಬಲಾಬಲ
ಭಗವಂತ್​ ಖೂಬಾ ಅವರಿಗೆ ಪೂರಕ ಅಂಶಗಳೇನು?
ಕಲಬುರಗಿ ಬೀದರ್ ರೈಲು ಸಂಚಾರ ಕಾಮಗಾರಿ ಪೂರ್ಣ ಮಾಡಿದ್ದು
ಜಿಲ್ಲೆಯನ್ನು ಸಂಪರ್ಕಿಸುವ ಹಲವು ರೈಲು ಸಂಚಾರ ಆರಂಭ
ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಪರಿವರ್ತನೆ

ಭಗವಂತ್​​ ಖೂಬಾ ಅವರಿಗೆ ಆತಂಕಗಳೇನು?
ಯಾರ ಕೈಗೂ ಸಿಗುವುದಿಲ್ಲ ಎನ್ನುವ ಬಲವಾದ ಆರೋಪ
ಕೇಂದ್ರದ ಕೆಲ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರದೇ ಇರುವುದು
ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡದೇ ಇರುವುದು
ಖೂಬಾರನ್ನು ಬದಲಿಸುವಂತೆ ಬಿಜೆಪಿ ಕಾರ್ಯಕರ್ತರೇ ಒತ್ತಡ ಹೇರಿದ್ದರು
ಸಾಮಾಜಿಕ ಜಾಲತಾಣಗಳಲ್ಲಿ ಸಂಸದರ ವಿರುದ್ಧ ಆಕ್ರೋಶ
ಹುತಾತ್ಮರ ಸ್ಮಾರಕ ಇನ್ನೂ ಅಪೂರ್ಣ
ಸಂಸದರ ಆದರ್ಶ ಗ್ರಾಮ ಇನ್ನೂ ಪೂರ್ಣಗೊಂಡಿಲ್ಲ

ಈಶ್ವರ್​​ ಖಂಡ್ರೆ ಅವರ ಪೂರಕ ಅಂಶಗಳೇನು?
ವೀರಶೈವ ಲಿಂಗಾಯತ ಮುಖಂಡರಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಳ್ಳುವ ನಾಯಕ
ಕಾಂಗ್ರೆಸ್​​ನ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಣೆ
ಚಿಂಚೊಳ್ಳಿ, ಆಳಂದ ಕ್ಷೇತ್ರದಲ್ಲಿ ದಿವಂಗತ ಧರಂಸಿಂಗ್ ಅವರ ಪ್ರಭಾವ
ಕ್ಷೇತ್ರದಲ್ಲಿ ಕಾಂಗ್ರೆಸ್​​ನ ಐವರು ಶಾಸಕರು ಇರುವುದು
ಮೈತ್ರಿಕೂಟದ ಒಮ್ಮತದ ಅಭ್ಯರ್ಥಿ ಆಗಿರುವುದರಿಂದ ಜೆಡಿಎಸ್ ಬೆಂಬಲ
ಈಗಾಗಲೇ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಮರಾಠರು

ಈಶ್ವರ್​ ಖಂಡ್ರೆ ಅವರಿಗಿರೋ ಆತಂಕಗಳೇನು?

ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿದ್ರೂ ಒಳಜಗಳ
ಬೀದರ್​​ನಲ್ಲಿ ಮೋದಿ ಸಮಾವೇಶ ನಡೆಸಿದರೆ ಲೆಕ್ಕಾಚಾರ ತಲೆಕೆಳಗಾಗಬಹುದು

ಪ್ರಭಾವ ಬೀರುವ ಅಂಶಗಳು

371(ಜೆ) ಕಲಂ ಸಮರ್ಪಕವಾಗಿ ಜಾರಿ ಆಗದಿರುವುದು
ಬ್ರಿಮ್ಸ್ ಅವ್ಯವಹಾರ ಅಕ್ರಮದ ಬಗ್ಗೆ ಗೊತ್ತಿದ್ರೂ ಕೈಕಟ್ಟಿ ಕುಳಿತಿರುವುದು
ಬರ ಪೀಡಿತ ತಾಲೂಕುಗಳಲ್ಲಿ ಇನ್ನೂ ರೈತರಿಗೆ ಪರಿಹಾರ ಸಿಗದಿರುವುದು
ನಿರುದ್ಯೋಗ ಹಾಗೂ ಅನಕ್ಷರತೆ ಜಿಲ್ಲೆಯ ಬಹುದೊಡ್ಡ ಸಮಸ್ಯೆ
ಕುಡಿಯುವ ನೀರಿನ ಸಮಸ್ಯೆ ಇದ್ದರೂ ಕೈಗೆ ಸಿಗದ ಮೂವರು ಸಚಿವರು
ಮೂವರು ಸಚಿವರಿದ್ದರೂ ಬೀದರ್ ಜಿಲ್ಲೆಯಲ್ಲಿ ಅಭಿವೃದ್ಧಿ ಮರೀಚಿಕೆ
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಸಿಗದ ಬೆಂಬಲ
ಕೇಂದ್ರ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಯೋಜನೆಗಳು ಸಿಗಲಿಲ್ಲ

ಸಂಸದರು ಮಾಡಿದ್ದೇನು..?

13 ಹೊಸ ರೈಲುಗಳಿಂದ ಅಭಿವೃದ್ಧಿಗೆ ವೇಗ
325 ಕೋಟಿ ರೂ. ವೆಚ್ಚದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ
ಸೆಂಟ್ರಲ್ ರೋಡ್ ಫಂಡ್ ಬಳಸಿ ಗ್ರಾಮೀಣ ರಸ್ತೆಗಳ ನಿರ್ಮಾಣ
10,000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ
ಉಡಾನ್ ಯೋಜನೆಯಡಿ ನಾಗರಿಕರಿಗೆ ವಿಮಾನಯಾನ
ಪಾಸ್ ಪೋರ್ಟ್ ಸೇವಾ ಕೇಂದ್ರ ಸ್ಥಾಪನೆ
2,45,256 ಕುಟುಂಬಗಳಿಗೆ ಶೌಚಾಲಯಗಳ ನಿರ್ಮಾಣ
ಸಂಸದರ ಅನುದಾನ 25 ಕೋಟಿ ಪೂರ್ಣಪ್ರಮಾಣದಲ್ಲಿ ಬಳಸಿದ ಸಾಧನೆ

ಕ್ಷೇತ್ರ ಪರಿಚಯ
ಬೀದರ್ ಕರ್ನಾಟಕದ ‘ಕಿರೀಟ’ ಎಂದೇ ಖ್ಯಾತಿಯ
ಬಹಮನಿ ಸುಲ್ತಾನರು ಆಳಿದ ನಾಡು, ಇಲ್ಲಿನ ಕೋಟೆ ಬಹಳ ಪ್ರಸಿದ್ಧ
ಶತಮಾನದ ಹಳೆಯ ಸ್ಮಾರಕಗಳ ನೆಲೆ
ಬಸವಣ್ಣನವರ ಕರ್ಮಭೂಮಿ
ಏಳು ಮಹಾದ್ವಾರದ ಕೋಟೆ, ಸುಲ್ತಾನರ ಅರಮನೆ
ಸಿಖ್ಖರ ಗುರುದ್ವಾರ, ಶಿವನ ಪಾಪನಾಶಿನಿ ದೇಗುಲ
ನರಸಿಂಹಸ್ವಾಮಿಯ ಪ್ರಸಿದ್ಧ ದೇಗುಲ

RELATED ARTICLES

Related Articles

TRENDING ARTICLES