Friday, November 22, 2024

ಗ್ರೌಂಡ್​ ರಿಪೋರ್ಟ್​ : ಕೇಸರಿ ಕಲಿ ‘ರಾಘವೇಂದ್ರ’ ವಿರುದ್ಧ ‘ಮಧು’ ಕಹಳೆ!

ಗ್ರೌಂಡ್​ ರಿಪೋರ್ಟ್​ 16 : ಶಿವಮೊಗ್ಗ ಲೋಕಸಭಾ ಕ್ಷೇತ್ರ

ಶಿವಮೊಗ್ಗ : ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮಾಜಿ ಮುಖ್ಯಮಂತ್ರಿಗಳ ಪುತ್ರರ ನಡುವಿನ ಹೋರಾಟಕ್ಕೆ ವೇದಿಕೆ ಆಗಿದೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿ. ಇವರಿಗೆ ಮಾಜಿ ಮುಖ್ಯಮಂತ್ರಿ ದಿ.ಎಸ್​ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಪ್ರಬಲ ಎದುರಾಳಿ.
ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. 1 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್​ ಶಾಸಕರಿದ್ದಾರೆ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಶಿವಮೊಗ್ಗ ನಗರ – ಬಿಜೆಪಿ -ಕೆ.ಎಸ್. ಈಶ್ವರಪ್ಪ

ಶಿಕಾರಿಪುರ – ಬಿಜೆಪಿ – ಯಡಿಯೂರಪ್ಪ

ಶಿವಮೊಗ್ಗ ಗ್ರಾಮಾಂತರ – ಬಿಜೆಪಿ – ಅಶೋಕ್ ನಾಯ್ಕ್

ಭದ್ರಾವತಿ – ಕಾಂಗ್ರೆಸ್ – ಬಿ.ಕೆ.ಸಂಗಮೇಶ್

ಸಾಗರ – ಬಿಜೆಪಿ – ಹಾಲಪ್ಪ

ತೀರ್ಥಹಳ್ಳಿ – ಬಿಜೆಪಿ – ಆರಗ ಜ್ಞಾನೇಂದ್ರ

ಸೊರಬ – ಬಿಜೆಪಿ – ಕುಮಾರ್ ಬಂಗಾರಪ್ಪ

ಬೈಂದೂರು – ಬಿಜೆಪಿ – ಸುಕುಮಾರ್ ಶೆಟ್ಟಿ

ಇದುವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್​, 5 ಬಾರಿ ಬಿಜೆಪಿ ತಲಾ 1 ಬಾರಿ ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಮತ್ತು 1 ಬಾರಿ ಸಮಾಜವಾದಿ ಪಾರ್ಟಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.
1951, 1957 : ಕೆ.ಜಿ ಒಡೆಯರ್, ಕಾಂಗ್ರೆಸ್​
1962 : ಎಸ್​.ವಿ ಕೃಷ್ಣಮೂರ್ತಿ ರಾವ್​. ಕಾಂಗ್ರೆಸ್
1967 : ಜೆ.ಹೆಚ್ ಪಾಟೀಲ್, ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ
1971 : ಟಿ.ವಿ ಚಂದ್ರಶೇಖರಪ್ಪ, ಕಾಂಗ್ರೆಸ್​
1977 : ಎ.ಆರ್ ಭದ್ರಿನಾರಾಯಣ್, ಕಾಂಗ್ರೆಸ್
1980 : ಎಸ್​.ಟಿ ಕೌದ್ರಿ, ಕಾಂಗ್ರೆಸ್
1984, 1989 : ಟಿ.ವಿ ಚಂದ್ರಶೇಖರಪ್ಪ, ಕಾಂಗ್ರೆಸ್
1991 : ಕೆ.ಜಿ ಶಿವಪ್ಪ, ಕಾಂಗ್ರೆಸ್
1996 : ಎಸ್​.ಬಂಗಾರಪ್ಪ, ಕಾಂಗ್ರೆಸ್
1998 : ಆಯನೂರು ಮಂಜುನಾಥ್, ಬಿಜೆಪಿ
1999 : ಎಸ್​​ . ಬಂಗಾರಪ್ಪ, ಕಾಂಗ್ರೆಸ್
2004 : ಎಸ್​.ಬಂಗಾರಪ್ಪ, ಬಿಜೆಪಿ
2005 : ಎಸ್​​​.ಬಂಗಾರಪ್ಪ, ಸಮಾಜವಾದಿ ಪಾರ್ಟಿ
2009 : ಬಿ.ವೈ ರಾಘವೇಂದ್ರ, ಬಿಜೆಪಿ
2014 : ಬಿ.ಎಸ್​ ಯಡಿಯೂರಪ್ಪ, ಬಿಜೆಪಿ
2018 : ಬಿ.ವೈ ರಾಘವೇಂದ್ರ, ಬಿಜೆಪಿ (ಉಪ ಚುನಾವಣೆ)

2014ರ ಚುನಾವಣೆ : 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್​ನ ಮಂಜುನಾಥ ಭಂಡಾರಿ ಅವರ ವಿರುದ್ಧ 3,63,394 ಮತಗಳ ಅಂತರದದ ಗೆಲುವು ದಾಖಲಿಸಿದ್ದರು. ಬಿ.ಎಸ್.​ ಯಡಿಯೂರಪ್ಪ ಅವರಿಗೆ 6,06,305 ಮತಗಳು ಬಂದಿದ್ದವು. ಮಂಜುನಾಥ ಭಂಡಾರಿ ಅವರು 2,42,911 ಮತಗಳನ್ನು ಪಡೆದಿದ್ದರು.
ಶಿವಮೊಗ್ಗ ಉಪಲೋಕ ಸಮರ – 2018
2018ರ ಉಪ ಚುನಾವಣೆಯಲ್ಲಿ ಜೆಡಿಎಸ್​ನ ಮಧುಬಂಗಾರಪ್ಪ ಅವರ ಎದುರು ಬಿಜೆಪಿಯ ಬಿ.ವೈ ರಾಘವೇಂದ್ರ ಅವರು 52,148 ಮತಗಳ ಅಂತರದ ಗೆಲುವು ಪಡೆದಿದ್ದರು. ಬಿ.ವೈ. ರಾಘವೇಂದ್ರ ಅವರಿಗೆ 5,43,306 ಮತಗಳು, ಮಧು ಬಂಗಾರಪ್ಪ ಅವರಿಗೆ 4,91,158 ಮತಗಳು ಬಂದಿದ್ದವು.

‘ಮತ’ ಗಣಿತ

ಪುರುಷರು 8,18,708

ಮಹಿಳೆಯರು 8,28,819

ಒಟ್ಟು 16,47,527

‘ಜಾತಿ’ ಗಣಿತ
ಲಿಂಗಾಯತರು 2,70,000

ಬ್ರಾಹ್ಮಣರು 1,50,000

ದಲಿತರು 2.50,000

ಈಡಿಗರು 2,00,000

ಮುಸ್ಲಿಂ 1,30,000

ಕುರುಬ 60,000

ಇತರೆ 5,00,000

ಅಭ್ಯರ್ಥಿಗಳ ಬಲಾಬಲ
ಬಿ.ವೈ ರಾಘವೇಂದ್ರ ಅವರ ಪೂರಕ ಅಂಶಗಳೇನು?
ಬಿ.ಎಸ್.​ ಯಡಿಯೂರಪ್ಪ ಅಭಿವೃದ್ಧಿಯ ನೇತಾರ ಎಂದೇ ಖ್ಯಾತಿ
ಕ್ಷೇತ್ರದಲ್ಲಿ ಯಡಿಯೂರಪ್ಪ ಹಿಡಿತ ಹೊಂದಿರುವುದು
ಶಿವಮೊಗ್ಗ ಬಿಜೆಪಿ ಭದ್ರಕೋಟೆ ಆಗಿರುವುದು
ಪ್ರಭಾವಿ ಬಿಜೆಪಿ ಮುಖಂಡರು ಹಾಗೂ ಶಾಸಕರ ಒಗ್ಗಟ್ಟು
ಲೋಕಸಭಾ ವ್ಯಾಪ್ತಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು
ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ಜವಾಬ್ದಾರಿಯ ಸಮರ್ಥ ನಿರ್ವಹಣೆ
ಪೂರ್ಣ ಪ್ರಮಾಣದ ಅನುದಾನದ ಬಳಕೆ

ಬಿ.ವೈ. ರಾಘವೇಂದ್ರ ಅವರಿಗೆ ಇರೋ ಆತಂಕಗಳೇನು?
ತಂದೆಯ ನೆರಳಿನಿಂದ ಹೊರಬಂದಿಲ್ಲ ಎನ್ನುವ ಆರೋಪ
ಅಪ್ಪನ ನೆರಳನ್ನೇ ಆಶ್ರಯಿಸಿರುವುದರಿಂದ ನಿರೀಕ್ಷಿತ ಸ್ಥಾನಮಾನ ಸಿಗೋದು ಕಷ್ಟ
ಪ್ರಬಲ ಸವಾಲು ಒಡ್ಡಿರುವ ಎದುರಾಳಿ ಮಧು ಬಂಗಾರಪ್ಪ
ಬಿಜೆಪಿ ಸೋಲಿಸಲು ದೋಸ್ತಿ ಮುಖಂಡರ ಒಗ್ಗಟ್ಟು
ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಮುಖಂಡರ ಸಂಪೂರ್ಣ ಬೆಂಬಲ
ಸಂಸದರು ಕ್ಷೇತ್ರದ ಜನರ ಕೈಗೆ ಸಿಗಲ್ಲ ಎನ್ನುವ ಆರೋಪ
ಪಕ್ಷದಲ್ಲಿ ಸ್ವಂತಿಕೆ, ಸ್ವತಂತ್ರ ಹಿಡಿತ ಸಾಧಿಸುವಲ್ಲಿ ವಿಫಲ

ಮಧು ಬಂಗಾರಪ್ಪ ಅವರಿಗೆ ಪೂರಕ ಅಂಶಗಳೇನು?
ಉಪ ಸಮರದಲ್ಲಿ ಪ್ರಬಲ ಪೈಪೋಟಿ ನೀಡಿದ್ದರು
ಪ್ರಭಾವಿ ಡಿ.ಕೆ. ಶಿವಕುಮಾರ್ ಬೆಂಬಲಕ್ಕೆ ನಿಂತಿರುವುದು
ದೋಸ್ತಿ ಮುಖಂಡರ ಒಗ್ಗಟ್ಟಿನ ಬೆಂಬಲದಿಂದ ಆತ್ಮವಿಶ್ವಾಸ
ಕ್ಷೇತ್ರದಲ್ಲಿ ಇನ್ನೂ ಇದೆ ದಿವಂಗತ ಎಸ್. ಬಂಗಾರಪ್ಪ ಪ್ರಭಾವ

ಮಧು ಬಂಗಾರಪ್ಪ ಅವರಿಗೆ ಆತಂಕಗಳೇನು?
ಬಿಜೆಪಿಯ ಭದ್ರಕೋಟೆಯ ಕ್ಷೇತ್ರ
ಬಿಜೆಪಿ ಕಾರ್ಯಕರ್ತರ ಪಡೆ ಅತ್ಯಂತ ಪ್ರಬಲ
ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಮುಖಂಡರ ಪ್ರಭಾವ
ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ದೋಸ್ತಿ ಮುಖಂಡರು ಇಲ್ಲದಿರುವುದು
ನರೇಂದ್ರ ಮೋದಿ ಪ್ರಭಾವ ಕ್ಷೇತ್ರದಲ್ಲಿ ಹೆಚ್ಚು
ಮೈತ್ರಿ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಒಲವು ಅಷ್ಟಕಷ್ಟೇ
ಕಾಂಗ್ರೆಸ್​ ಕಾರ್ಯಕರ್ತರಿಗೂ ಅಷ್ಟೇನೂ ಒಲವಿಲ್ಲ

ಸಂಸದರು ಮಾಡಿದ್ದೇನು?
ಕೇಂದ್ರ ಸರ್ಕಾರ ಕ್ಷೇತ್ರಕ್ಕೆ 17.5 ಕೋಟಿ ರೂ. ಅನುದಾನ ನೀಡಿತ್ತು
ಜಿಲ್ಲಾಡಳಿತದಿಂದ 15.7 ಕೋಟಿ ರೂ. ಅನುದಾನ ರಿಲೀಸ್​
ವಿವಿಧ ಯೋಜನೆಗಳಿಗೆ 14.47 ಕೋಟಿ ರೂ. ಅನುದಾನ
ಸಂಸತ್ತಿನಲ್ಲಿ ನಡೆದ 14 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ
ಸಂಸತ್ತಿನಲ್ಲಿ ಶೇ 69ರಷ್ಟು ಹಾಜರಾತಿ
ತಮ್ಮ ಲೋಕಸಭಾ ಅವಧಿ ಮುಗಿಯುವ ಮೊದಲೇ ರಾಜೀನಾಮೆ

ಪ್ರಭಾವ ಬೀರುವ ಅಂಶಗಳು
ಸಾಗರ ಕ್ಷೇತ್ರದ ತುಮರಿ ಸೇತುವೆ ಇನ್ನೂ ಆರಂಭವಾಗಿಲ್ಲ
ಭದ್ರಾವತಿಯಲ್ಲಿ VSIL ಮತ್ತು MPM ಕಾರ್ಖಾನೆಗಳ ಪುನಶ್ಚೇತನ ಆಗಿಲ್ಲ
ಕಾರ್ಮಿಕರಿಗೆ ಧೈರ್ಯ ತುಂಬುವಂತಹ ಕೆಲಸ ಆಗುತ್ತಿಲ್ಲ
ಬಹಳ ಕಡೆ ಬಗರ್​ ಹುಕುಂ ಸಮಸ್ಯೆ ಇದೆ
ಜನರಿಗೆ ಅಭಯ ನೀಡುವ ಕಾರ್ಯ ನಡೆದಿಲ್ಲ
ಸೊರಬ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚು
ಪ್ರಮುಖವಾಗಿ ರಸ್ತೆ, ಕುಡಿಯುವ ನೀರು, ಸಾರಿಗೆ ಸಮಸ್ಯೆ
ಪ್ರವಾಸಿ ಸ್ಥಳಗಳ ಅಭಿವೃದ್ಧಿ ಆಗಿಲ್ಲ, ಹೀಗಾಗಿ ಪ್ರವಾಸೋದ್ಯಮ ಕುಂಠಿತ
ಶಿವಮೊಗ್ಗ-ಹರಿಹರ ರೈಲು ಮಾರ್ಗದ ಸಮೀಕ್ಷೆಗಷ್ಟೇ ಒಪ್ಪಿಗೆ

ಕ್ಷೇತ್ರ ಪರಿಚಯ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ
ವಿಶ್ವ ವಿಖ್ಯಾತ ಜೋಗ ಜಲಪಾತ
ನೈಸರ್ಗಿಕ ಸೌಂದರ್ಯದ ಖನಿ ಸಹ್ಯಾದ್ರಿ ಪರ್ವತ ಶ್ರೇಣಿ
ಲಿಂಗನಮಕ್ಕಿ ಅಣೆಕಟ್ಟು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ
ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥ
ಆಗುಂಬೆಯ ಸೂರ್ಯಾಸ್ತ ಬಹಳ ಪ್ರಸಿದ್ಧ

RELATED ARTICLES

Related Articles

TRENDING ARTICLES