Thursday, December 26, 2024

ಪ್ರಚಾರದ ವೇಳೆ ಬಿಜೆಪಿ ಶಾಲು ಬಳಕೆಗೆ ಅಡ್ಡಿ..!

ಹಾಸನ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಚಿಹ್ನೆಯ ಶಾಲ್ ಬಳಸಲು ಚುನಾವಣಾ ಸಿಬ್ಬಂದಿ ಅಡ್ಡಿಪಡಿಸಿದ್ದಾರೆ. ಪ್ರಚಾರದ ವೇಳೆ ಶಾಲ್ ಹಾಕಿ ಪ್ರಚಾರ ಮಾಡದಂತೆ ಸೂಚಿಸಿದ ಚುನಾವಣಾ ಸಿಬ್ಬಂದಿ, ಹಾಸನದ ರಾಜಘಟ್ಟದಲ್ಲಿ ಬಿಜೆಪಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ತಡೆದಿರುವ ಘಟನೆ ನಡೆದಿದೆ.

ಕಾರ್ಯಕರ್ತರು ಪ್ರಚಾರದ ಸಂದರ್ಭ ಬಿಜೆಪಿ ಚಿಹ್ನೆ ಇರುವ ಶಾಲು ಬಳಸುವುದಕ್ಕೆ ಚುನಾವಣಾ ಸಿಬ್ಬಂದಿ  ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಶಾಸಕ ಪ್ರೀತಂಗೌಡ ಅವರು ಫುಲ್​ ಗರಂ ಆಗಿದ್ದಾರೆ. ಯಾರ್ರೀ ನಿಮಗೆ ಹೇಳಿದ್ದು ಅಂತ ಚುನಾವಣಾಧಿಕಾರಿಗಳನ್ನು ಪ್ರಶ್ನಿಸಿದ ಪ್ರೀತಂ ಗೌಡ ಅವರು ಕೂಡಲೇ ಡಿಸಿಗೆ ಫೋನ್ ಮಾಡಿದ್ದಾರೆ. ಫೋನ್ ನಲ್ಲಿಯೇ ಡಿಸಿ ಜೊತೆಗೆ ಪ್ರೀತಂಗೌಡ ಘಟನೆ ಬಗ್ಗೆ ಚರ್ಚಿಸಿದ್ದಾರೆ. ಡಿಸಿ ಸೂಚನೆ ಬಳಿಕ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ. “ಸರಿಯಾಗಿ ವಿಷಯ ತಿಳಿದುಕೊಳ್ಳಿ” ಎಂದು ಶಾಸಕ ಪ್ರೀತಂಗೌಡ ಅಸಮಧಾನ ವ್ಯಕ್ತಪಡಿಸಿದ್ರು.

RELATED ARTICLES

Related Articles

TRENDING ARTICLES