Wednesday, January 22, 2025

ಮೇಕಪ್ ಸುಮಲತಾ – ಮಂಡ್ಯ ಕಣದಲ್ಲಿ ಹೊಸ ತಂತ್ರ..!

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸಿದ್ದು ಒಂದೆಡೆ ರಾಜಕೀಯ ಮುಖಂಡರು ಪ್ರಚಾರದಲ್ಲಿ ಬ್ಯುಸಿಯಾಗಿದ್ರೆ, ಇನ್ನೊಂದೆಡೆ ಪರಸ್ಪರ ವಾಗ್ದಾಳಿಯೂ ಮುಂದುವರಿದಿದೆ. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಮಣಿಸಲು ಮತ್ತೊಂದು ಕುತಂತ್ರ ಸಿದ್ಧವಾಗಿದ್ದು, ಮತದಾರರನ್ನು ಗೊಂದಲಕ್ಕೆ ಸಿಲುಕಿಸಲು ಹೊಸ ಪ್ಲಾನ್ ನಡೆದಿದೆ. ಮೂವರು ಸುಮಲತಾ ಅವರನ್ನು ಕಣಕ್ಕಿಳಿಸಿ ಮತದಾರರನ್ನು ಕನ್​ಫ್ಯೂಸ್ ಮಾಡೋ ಪ್ಲಾನ್ ಆಯ್ತು. ಇದೀಗ ಸುಮಲತಾ ಅಂಬರೀಶ್ ವಿರುದ್ಧ ‘ಮೇಕಪ್ ಸುಮಲತಾ’ ಅಸ್ತ್ರ ಬಂದಿದೆ. ಸುಮಲತಾ ಅಂಬರೀಶ್​​​ ಕ್ರಮ ಸಂಖ್ಯೆ 20 ಆಗಿದ್ದು, 19ರ ಕ್ರಮ ಸಂಖ್ಯೆಯ ಸುಮಲತಾಗೆ, ಸುಮಲತಾ ಅಂಬರೀಶ್​​​​ ರೀತಿ ಕಾಣುವಂತೆ ಮೇಕಪ್ ಮಾಡಲಾಗಿದೆ. ಇವಿಎಂನಲ್ಲಿ ಸುಮಲತಾ ಅಂಬರೀಶ್ ರೀತಿ ಮೇಕಪ್ ಮಾಡಿಸಿರುವ ಫೋಟೋವನ್ನು ಹಾಕಲಾಗಿದೆ. ಚುನಾವಣೆ ಗೆಲ್ಲಲು ಹಲವು ತಂತ್ರಗಳನ್ನು ಮಾಡಲಾಗುತ್ತಿದ್ದು, ಮತದಾರನ ಒಲವು ಯಾರ ಕಡೆಗಿರುತ್ತದೆಯೋ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES