Friday, September 20, 2024

ಪಂಜಾಬ್​ ಎದುರು ಚೆನ್ನೈಗೆ ‘ಸೂಪರ್​’ ಗೆಲುವು..!

ಚೆನ್ನೈ : ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್​​ ಕಿಂಗ್ಸ್​ ಇಲೆವೆನ್ ಪಂಜಾಬ್​ ವಿರುದ್ಧ 22ರನ್​ಗಳ ಸೂಪರ್ ಗೆಲುವು ದಾಖಲಿಸಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 160ರನ್ ಗಳಿಸಿತು. ಶೇನ್​ ವ್ಯಾಟ್ಸನ್ 26, ಡುಪ್ಲೆಸಿಸ್ 54, ಸುರೇಶ್ ರೈನಾ 17, ನಾಯಕ ಧೋನಿ ಅಜೇಯ 37, ಅಂಬಟಿ ರಾಯುಡು ಅಜೇಯ 21ರನ್ ಗಳಿಸಿದರು.
161ರನ್ ಗುರಿ ಬೆನ್ನಟ್ಟಿದ ಪಂಜಾಬ್​ 20 ಓವರ್ ಪೂರ್ಣಗೊಳಿಸಿದರೂ 5 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 135ರನ್​ಗಳನ್ನು ಮಾತ್ರ. ಕನ್ನಡಿಗ ಕೆ.ಎಲ್ ರಾಹುಲ್ (55) ಮತ್ತು ಸರ್ಫರಾಜ್​ ಖಾನ್ (67) ಬಿಟ್ಟರೆ ಉಳಿದ ಯಾವ ಬ್ಯಾಟ್ಸ್ ಮನ್ ಗಳೂ ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಪಂಜಾಬ್ ಸೋಲುಂಡಿತು.

RELATED ARTICLES

Related Articles

TRENDING ARTICLES