Monday, January 6, 2025

🕚 JUST IN :

ದರ್ಶನ್​, ಯಶ್​ಗೆ ವಿಶ್ರಾಂತಿ, ಸುಮಲತಾಗೆ ದೊಡ್ಡಣ್ಣ ಸಾಥ್..!

ಮಂಡ್ಯ: ನಟ ದರ್ಶನ್​ ಹಾಗೂ ಯಶ್ ಅವರು ಯುಗಾದಿ ಹಬ್ಬದ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ತಾತ್ಕಾಲಿಕ ವಿರಾಮ ನೀಡಿದ್ದಾರೆ. ಹಬ್ಬ ಸಮೀಪಿಸಿರುವುದರಿಂದ ಇನ್ನು ಮೂರು ದಿನಗಳ ಕಾಲ ನಟ ಯಶ್, ಹಾಗೂ ದರ್ಶನ್ ವಿಶ್ರಾಂತಿ ಪಡೆಯಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸುಮಲತಾ ಅವರಿಗೆ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ನಟ ದೊಡ್ಡಣ್ಣ ಸಾಥ್ ನೀಡಲಿದ್ದಾರೆ. ಸುಮಲತಾ ಅವರು ಶ್ರೀರಂಗಪಟ್ಟಣದಲ್ಲಿ ಮತ್ತು ಅಭಿಷೇಕ್ ಅವರು ಮಳವಳ್ಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಕಳೆದ ಮೂರು ದಿನಗಳಿಂದ ನಟ ದರ್ಶನ್ ಹಾಗೂ ಯಶ್ ಅವರು ಸುಮಲತಾ ಪರ ಅಬ್ಬರ ಪ್ರಚಾರ ನಡೆಸಿದ್ದರು.

RELATED ARTICLES

Related Articles

TRENDING ARTICLES