ಬೆಂಗಳೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆಯೊಂದನ್ನು ಮಾಡಿದ್ದಾರೆ..! ಮಂಡ್ಯವನ್ನು ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಮಾಡ್ತೀನಿ ಅನ್ನೋದು ಯಾಕೆ ಅಂತ ಪ್ರಶ್ನಿಸೋ ಮೂಲಕ ಸುಮಲತಾ ಕುಮಾರಸ್ವಾಮಿ ಅವರ ವಿರುದ್ಧ ಸೌಮ್ಯವಾಗಿ ವಾಕ್ಸಮರ ನಡೆಸಿದರು.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ನಾನು ಮಂಡ್ಯವನ್ನು ಅಭಿವೃದ್ಧಿ ಮಾಡ್ತೀನಿ ಮಗನನ್ನು ಗೆಲ್ಲಿಸಿ ಎಂಬುದು ಎಷ್ಟು ಸರಿ? ಅದು ರಾಜಕಾರಣವಾಗುತ್ತೆ. ಮಂಡ್ಯ ಅಭಿವೃದ್ಧಿಗೆ ಕೆಲಸ ಮಾಡ್ತೀವಿ ಅಂದರೆ ಮಾಡಲಿ. ಅದನ್ನೂ ನಾನು ಸ್ವಾಗತಿಸುತ್ತೇನೆ. ಆದರೆ, ಮಗನನ್ನು ಗೆಲ್ಲಿಸಿ ಅಭಿವೃದ್ಧಿ ಮಾಡ್ತೀನಿ ಅನ್ನೋದು ಎಷ್ಟು ಸರಿ?’ ಎಂದರು.
ಹಾಗೆಯೇ ತಾನು 5 ವರ್ಷದಲ್ಲಿ ಮಂಡ್ಯವನ್ನು ಪ್ಯಾರೀಸ್ ಮಾಡಿ ಬಿಡ್ತೀನಿ ಅನ್ನಲ್ಲ. ಆದರೆ, ಮಂಡ್ಯದ ಅಭಿವೃದ್ಧಿಗೆ ಎಂಪಿಯಾಗಿ ಸಾಧ್ಯವಾದಷ್ಟೂ ಶ್ರಮಿಸುತ್ತೇನೆ ಎಂಬ ಭರವಸೆ ನೀಡಿದ್ರು.
ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!
TRENDING ARTICLES