ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಂಟೆಗೆ ಬಂದವರನ್ನು ಹುಟ್ಟಿಲ್ಲ ಅನ್ನಿಸಿ ಬಿಡ್ತಾರಂತೆ..! ಇಂಥಾ ಒಂದು ಯಡವಟ್ಟಿನ ಹೇಳಿಕೆಯನ್ನು ನೀಡಿರೋದು ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನವರು..!
ಬೆಳಗಾವಿಯ ಚಿಕ್ಕೋಡಿ ಪಟ್ಟಣದ ಆರ್ ಡಿ ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ವ್ಯತ್ಯಾಸವನ್ನು ಗುರುತಿಸೋ ಸಾಹಸಕ್ಕೆ ಕೈ ಹಾಕಿ ವಿವಾದಿತ ಹೇಳಿಕೆ ನೀಡಿದ್ರು..!
ಗಾಂಧೀಜಿ ಅವರಿಗೆ ಎಡ ಕೆನ್ನೆಗೆ ಹೊಡೆದದರೆ ಬಲಗೆನ್ನೆ ತೋರಿಸ್ತಿದ್ದರಂತೆ. ಆದರೆ ಮೋದಿ ಹಾಗಲ್ಲ, ಮುಟ್ಟಿದರೆ ಜೀವಂತವಾಗಿ ಇಲ್ಲ ಅನಿಸಿ ಬಿಡ್ತಾರೆ. ಇದೇ ಕಾರಣಕ್ಕೆ ಯುವಕರು ಹೆಚ್ಚಾಗಿ ಮೋದಿಯನ್ನು ಇಷ್ಟಪಡ್ತಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
https://www.facebook.com/powertvnews/videos/390853631646804/?eid=ARBXXK_XRy4XyFv0FR-GxzLO74TyegHKQiDLF6TBrjtgk0pxpWiRyOy7Ofco4hPnr5aKESXoIeqXNAXN