ಗ್ರೌಂಡ್ ರಿಪೋರ್ಟ್ 10 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ದಕ್ಷಿಣ ಕನ್ನಡ : ಪ್ರಖರ ವಾಗ್ಮಿ ನಳೀನ್ ಕುಮಾರ್ ಕಟೀಲ್ ಮತ್ತು ಯುವ ನಾಯಕ ಮಿಥುನ್ ರೈ ಅವರ ನಡುವಿನ ಪೈಪೋಟಿಗೆ ವೇದಿಕೆಯಾಗಿದೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ. ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲವನ್ನು ಎದುರು ನೋಡುತ್ತಿದ್ದಾರೆ. ಅವರ ವಿಜಯ ಯಾತ್ರೆಗೆ ಬ್ರೇಕ್ ಹಾಕಲು ಮಿಥುನ್ ರೈ ಉತ್ಸುಕರಾಗಿದ್ದಾರೆ.
ಈ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಬಿಜೆಪಿ ಹಾಗೂ 1ರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.
ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಮಂಗಳೂರು – ಕಾಂಗ್ರೆಸ್ -ಯುಟಿ ಖಾದರ್
ಮಂಗಳೂರು ಉತ್ತರ – ಬಿಜೆಪಿ -ಡಾ.ಭರತ್ ಶೆಟ್ಟಿ
ಮಂಗಳೂರು ದಕ್ಷಿಣ – ಬಿಜೆಪಿ -ವೇದವ್ಯಾಸ ಕಾಮತ್
ಬೆಳ್ತಂಗಡಿ- ಬಿಜೆಪಿ- ಹರೀಶ್ ಪೂಂಜ
ಬಂಟ್ವಾಳ -ಬಿಜೆಪಿ -ರಾಜೇಶ್ ನಾಯಕ್
ಮೂಡಬಿದ್ರಿ- ಬಿಜೆಪಿ -ಉಮಾನಾಥ್ ಕೋಟ್ಯಾನ್
ಪುತ್ತೂರು -ಬಿಜೆಪಿ- ಸಂಜೀವ್ ಮಠಂದೂರ್
ಸುಳ್ಯ -ಬಿಜೆಪಿ -ಎಸ್. ಅಂಗಾರ
2 ಬಾರಿಯೂ ಕಟೀಲ್ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಸ್ಥಿತ್ವಕ್ಕೆ ಬಂದ ಮೇಲೆ ನಡೆಯುತ್ತಿರುವ ಮೂರನೇ ಲೋಕ ಸಮರವಿದು. 2009 ಮತ್ತು 2014 ಎರಡೂ ಬಾರಿಯೂ ಬಿಜೆಪಿಯ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಅವರು ಗೆಲುವು ಸಾಧಿಸಿದ್ದಾರೆ. ಹ್ಯಾಟ್ರಿಕ್ ಗೆಲುವನ್ನು ಎದುರು ನೋಡುತ್ತಿರುವ ನಳೀನ್ ಕುಮಾರ್ ಕಟೀಲ್, 1,43, 709 ಮತಗಳ ಅಂತರದಿಂದ ಕಾಂಗ್ರೆಸ್ನ ಜನಾರ್ದನ ಪೂಜಾರಿ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ನಳೀನ್ ಕುಮಾರ್ ಕಟೀಲ್ ಅವರಿಗೆ 6,42,739 ಮತಗಳು, ಜನಾರ್ದನ ಪೂಜಾರಿ ಅವರಿಗೆ 4,99,030 ಮತಗಳು ಬಂದಿದ್ದವು.
‘ಮತ’ಗಣಿತ
ಪುರುಷರು 8,33,729
ಮಹಿಳೆಯರು 8,63,698
ಯುವ ಮತದಾರರು
ಒಟ್ಟು – 16,97,417
‘ಜಾತಿ’ ಗಣಿತ
ಮುಸ್ಲಿಂ 4,50,000
ಕ್ರೈಸ್ತ 1,60,000
ಹಿಂದೂ 10,87,000
ಹಿಂದೂ ಮತಗಳ ಜಾತಿವಾರು ವಿಂಗಡಣೆ
ಬಿಲ್ಲವ 4,30,000
ಬಂಟ 3,00,000
ದಲಿತ 1,30,000
ಬ್ರಾಹ್ಮಣ 1,20,000
ಒಕ್ಕಲಿಗ 75,000
ಇತರೆ 30,000
ಅಭ್ಯರ್ಥಿಗಳ ಬಲಾಬಲ
ನಳೀನ್ ಕುಮಾರ್ ಕಟೀಲ್ ಅವರಿಗೆ ಪೂರಕ ಅಂಶಗಳು
ಎರಡು ಬಾರಿ ಸಂಸದರಾದ ಅನುಭವ ಇರುವುದು
ಕೇಂದ್ರದ ನಾಯಕರ ಜೊತೆ ಸದಾ ಒಡನಾಟದಿಂದ ಇರುವುದು
ಜಿಲ್ಲೆಯಲ್ಲಿ ಮಾಡಿದ ಹಲವಾರು ಅಭಿವೃದ್ಧಿ ಕಾರ್ಯಗಳು
ಜನಸಾಮಾನ್ಯರ ಕೈಗೆ ಸುಲಭವಾಗಿ ಸಿಗಬಲ್ಲ ಸಂಸದರು
ಜನರ ಕಷ್ಟಗಳಿಗೆ ಬೇಗ ಸ್ಪಂದಿಸುವ ಗುಣವಿರುವುದು
ಭ್ರಷ್ಟಾಚಾರ ವಿರೋಧಿ, ನೇರ ನುಡಿ, ಪ್ರಾಮಾಣಿಕ ಎಂಬ ಹೆಗ್ಗಳಿಕೆ
ಕ್ಷೇತ್ರಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅಲೆ ಇರುವುದು
ನಳೀನ್ ಕುಮಾರ್ ಕಟೀಲ್ ಅವರಿಗೆ ಆತಂಕಗಳೇನು?
ವಿಜಯಾ ಬ್ಯಾಂಕ್ ವಿಲೀನ ಸಂದರ್ಭ ಸಂಸತ್ನಲ್ಲಿ ಮಾತನಾಡದೇ ಇರುವುದು
ಪಂಪ್ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ 10 ವರ್ಷವಾದರೂ ಮುಗಿಸದಿರುವುದು
ತಮ್ಮದೇ ಕಾರ್ಯಕರ್ತರ ಬಗ್ಗೆ ಇರುವ ತಾತ್ಸಾರ ಮನೋಭಾವ ಮುಳುವಾಗುವ ಸಾಧ್ಯತೆ
ಜಿಲ್ಲೆಯ ಸಂಘ ಪರಿವಾರದ ನಾಯಕರ ಅವಕೃಪೆಗೆ ಒಳಗಾಗಿರುವುದು
ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳು ಪೂರ್ತಿಯಾಗದಿರುವುದು
ಮಿಥುನ್ ರೈ ಅವರಿಗೆ ಪೂರಕ ಅಂಶಗಳು
ಯುವ ನಾಯಕತ್ವ, ಯುವಕರ ನಡುವೆ ಸದಾ ಒಡನಾಟ
ಮೃದು ಹಿಂದುತ್ವ, ಸಂಘಪರಿವಾರಕ್ಕೂ ಇಷ್ಟವಾಗಬಹುದಾದ ಕ್ಯಾರೆಕ್ಟರ್
ಭಾಷಾ ಜ್ಞಾನ, ಪದವೀಧರ ಯುವಕ ಪ್ಲಸ್ ಪಾಯಿಂಟ್
ಸಮಾಜ ಸೇವೆ, ಗೋಪೂಜೆ ಮೂಲಕ ಸರ್ವರಿಗೂ ಹತ್ತಿರವಾಗಿರುವ ಮಿಥುನ್ ರೈ
ಕಾಂಗ್ರೆಸ್ನ ಹಿರಿಯ ನಾಯಕರ ಒಮ್ಮತದ ಬೆಂಬಲ
ಮಿಥುನ್ ರೈ ಅವರಿಗೆ ಆತಂಕಗಳೇನು?
ಅಹಿತಕರ ಘಟನೆಗಳಲ್ಲೂ ಮಿಥುನ್ ಹೆಸರು ಕೇಳಿಬಂದಿರುವುದು
ಮುಸ್ಲಿಂ ಸಮುದಾಯದಿಂದ ಮಿಥುನ್ ವಿರುದ್ಧ ಕೇಳಿಬರುತ್ತಿರುವ ಅಪಸ್ವರ
ರಾಜಕೀಯದಲ್ಲಿ ಅನುಭವ ಇಲ್ಲದಿರುವುದು
ಮೋದಿ ಅಲೆಯಿಂದಾಗಿ ಯುವ ಮತದಾರರನ್ನು ಸೆಳೆಯುವುದು ಕಷ್ಟ
ಪ್ರಭಾವ ಬೀರುವ ಅಂಶಗಳು
ಲಾಭದಲ್ಲಿದ್ದ ವಿಜಯಾ ಬ್ಯಾಂಕ್ನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿರುವುದು
ಪಂಪ್ವೆಲ್ ಹಾಗೂ ತೊಕ್ಕೊಟ್ಟು ಫ್ಲೈ ಓವರ್ 8 ವರ್ಷದಿಂದ ನೆನೆಗುದಿಗೆ ಬಿದ್ದಿರುವುದು
ರಾಷ್ಟ್ರೀಯತೆ ಹಾಗೂ ಹಿಂದುತ್ವದ ವಿಚಾರ
ಬಿಜೆಪಿಯೊಳಗಿನ ಆಂತರಿಕ ಅಸಮಾಧಾನ, ಕಾಂಗ್ರೆಸ್ನಲ್ಲೂ ಇರುವ ಗೊಂದಲ
ಸಂಸದರು ಮಾಡಿದ್ದೇನು? (ಅನುದಾನ ಬಳಕೆ)
ಆದರ್ಶ ಗ್ರಾಮ ಯೋಜನೆ ಸಮರ್ಪಕವಾಗಿ ಜಾರಿಗೆ ತಂದಿರುವವರಲ್ಲಿ ಅಗ್ರಸ್ಥಾನ
ಸುಳ್ಯದ ಸಮೀಪ ಬಳ್ಪ ಕುಗ್ರಾಮವನ್ನು ದತ್ತು ಪಡೆದು ಆದರ್ಶ ಗ್ರಾಮವನ್ನಾಗಿ ಮಾಡಿದ್ದಾರೆ
ಈವರೆಗೆ ಒಟ್ಟು 47 ಬಗೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಯಶಸ್ವಿಯಾಗಿವೆ
ಮಿನಿಹಳ್ಳ, ನಿಡುಗಲ್ಲು, ಚಾರ್ಮಾಡಿಯಲ್ಲಿ 3 ಸೇತುವೆ ನಿರ್ಮಾಣಕ್ಕೆ 19.80 ಕೋಟಿ ರೂಪಾಯಿ ಬಿಡುಗಡೆ
ರಾಷ್ಟ್ರೀಯ ಹೆದ್ದಾರಿ 75ರ ಬಿಸಿ ರೋಡ್, ಅಡ್ಡಹೊಳೆ ಪ್ರದೇಶ 2,373 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಕ್ಷೇತ್ರ ಪರಿಚಯ
ಧಾರ್ಮಿಕ, ಆರ್ಥಿಕ ಚಟುವಟಿಕೆಗಳಿಗೆ ಬಹಳ ಹೆಸರುವಾಸಿ
ಸುಪ್ರಸಿದ್ಧ ಆಸ್ಪತ್ರೆಗಳು, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಇವೆ
ಮಂಗಳೂರು ವಿಶ್ವವಿದ್ಯಾಲಯ, ಸ್ವಾಯತ್ತ ವಿದ್ಯಾಲಯಗಳು ಜಿಲ್ಲೆಗೆ ಮುಕುಟದಂತೆ.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇಗುಲ,
ಕದ್ರಿ ಮಂಜುನಾಥ ದೇಗುಲ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಧಾರ್ಮಿಕ ಕ್ಷೇತ್ರಗಳು
ಪುತ್ತೂರು ಮಹಾಲಿಂಗೇಶ್ವರ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳು ಬಹಳ ಪ್ರಸಿದ್ಧ
ಮಿಲಾಗ್ರಿಸ್ , ರೊಸಾರಿಯೋ ಚರ್ಚ್, ಉಳ್ಳಾಲ ಸಯ್ಯದ್ ಮದನಿ ದರ್ಗಾ ಭಕ್ತರ ನೆಚ್ಚಿನ ತಾಣ
3 ರಾಷ್ಟ್ರೀಯ ಹೆದ್ದಾರಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರೈಲ್ವೆ ಸಂಪರ್ಕ, ಸರ್ವಋತು ಬಂದರು ಇರುವುದು ಹಿರಿಮೆ
ಸಂಸ್ಕೃತಿಗಳ ಸಮ್ಮಿಲನದ ಬೀಡು ದಕ್ಷಿಣ ಕನ್ನಡ ಕ್ಷೇತ್ರ