Wednesday, November 6, 2024

ಮಂಡ್ಯದಲ್ಲಿ ಸುಮಲತಾ ಪರ ರಾಕಿಭಾಯ್ ಪ್ರಚಾರ

ಮಂಡ್ಯ: ಲೋಕಸಭಾ ಚುನಾವಣೆ ಸಮೀಪಿಸಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮಲತಾ ಪರ ಪ್ರಚಾರ ನಡೆಸಿ, ಮತ ಯಾಚಿಸಿದ್ದರು. ಇಂದು ನಟ ಯಶ್ ಅವರು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ನಡೆಸಲಿದ್ದಾರೆ. ಮಂಡ್ಯ ರಣಕಣದಲ್ಲಿಂದು ಸ್ಟಾರ್ ರಂಗು ಹೆಚ್ಚಲಿದೆ. ಮಂಡ್ಯ ಅಖಾಡದಲ್ಲಿ ‘ರಣಕಹಳೆ’ ಮೊಳಗಿಸಲು ನಟ ದರ್ಶನ್ ಹಾಗೂ ಯಶ್​ ಸಿದ್ಧರಾಗಿದ್ದಾರೆ. ಇಂದು ಸುಮಲತಾ ಪರ ದರ್ಶನ್​, ಯಶ್​ ಪ್ರತ್ಯೇಕವಾಗಿ ಪ್ರಚಾರ ನಡೆಸಲಿದ್ದಾರೆ. ಸುಮಲತಾ ಅಂಬರೀಶ್ ಅವರು ಇಂದು ಮದ್ದೂರು ಭಾಗದಲ್ಲಿ ಪ್ರಚಾರ ನಡೆಸಲಿದ್ದು, ಮಂಡ್ಯ ನಗರದಲ್ಲಿ ನಟ ದರ್ಶನ್ ಅವರು​ ಮತ ಯಾಚಿಸಲಿದ್ದಾರೆ. ಶ್ರೀರಂಗಪಟ್ಟಣದ ವ್ಯಾಪ್ತಿಯಲ್ಲಿ ನಟ ಯಶ್​ ಚುನಾವಣಾ ಪ್ರಚಾರ ನಡೆಸಿ, ಸುಮಲತಾ ಪರ ಮತ ಕೇಳಲಿದ್ದಾರೆ.

RELATED ARTICLES

Related Articles

TRENDING ARTICLES