Monday, November 18, 2024

ಕಾಂಗ್ರೆಸ್​ ಪ್ರಣಾಳಿಕೆ ‘ಜನ್​ ಆವಾಜ್’​ ರಿಲೀಸ್​

ದೆಹಲಿ: ‘ಜನರ ಧ್ವನಿ, ನಾವು ನಿಭಾಯಿಸುತ್ತೇವೆ’ ಎಂಬ ಹೆಸರಲ್ಲಿ ಕಾಂಗ್ರೆಸ್​ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. 54 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಸುಳ್ಳು ಆಶ್ವಾಸನೆ ಇರದಂತೆ ಗಮನ ಹರಿಸಲಾಗಿದೆ. ಮುಖ್ಯವಾಗಿ ಕೃಷಿಗೆ ಪ್ರತ್ಯೇಕ ಬಜೆಟ್​ ಮಂಡನೆ ಮಾಡುವುದಾಗಿ ಕಾಂಗ್ರೆಸ್​ ವಾಗ್ದಾನ ನೀಡಿದ್ದು, ರೈತರು ಸಾಲ ಮರುಪಾವತಿ ಮಾಡದಿದ್ರೆ ಕ್ರಿಮಿನಲ್​ ಪ್ರಕರಣ ದಾಖಲಿಸುವಂತಿಲ್ಲ ಎಂದು ಹೇಳಿದೆ.

ಪ್ರಣಾಳಿಕೆ ಬಿಡುಗಡೆ ಸಂದರ್ಭ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, “ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಪ್ರತಿ ತಿಂಗಳು 6 ಸಾವಿರ ರೂಪಾಯಿ ನೀಡಲಾಗುತ್ತದೆ. ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ 10 ಲಕ್ಷ ಉದ್ಯೋಗಗಳ ಸೃಷ್ಟಿ ಮಾಡಲಾಗುತ್ತದೆ. ಮನರೇಗಾ ಯೋಜನೆಯಲ್ಲಿ ಕನಿಷ್ಠ ಉದ್ಯೋಗ ದಿನಗಳನ್ನು 100 ದಿನಗಳಿಂದ 150ಕ್ಕೆ ಏರಿಕೆ ಮಾಡಲಾಗುತ್ತದೆ. ಆರೇ ತಿಂಗಳಲ್ಲಿ ದೇಶದಲ್ಲಿ ಖಾಲಿ ಇರುವ 22 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡಲಾಗುತ್ತದೆ. ಬಜೆಟ್​ನಲ್ಲಿ ಶೇ. 6ರಷ್ಟು ಹಣ ಶಿಕ್ಷಣಕ್ಕೆ ಮೀಸಲು ಇಡಲಾಗುತ್ತದೆ” ಅಂತ ಹೇಳಿದ್ದಾರೆ. 

RELATED ARTICLES

Related Articles

TRENDING ARTICLES