Tuesday, October 15, 2024

ಉಮೇಶ್​ ಜಾಧವ್​ ರಾಜೀನಾಮೆ ಅಂಗೀಕಾರ

ಬೆಂಗಳೂರು: ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಿದೆ. ಮಾರ್ಚ್​ 4ರಂದು ಚಿಂಚೋಳಿ ಕ್ಷೇತ್ರದ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಕೋಲಾರದಲ್ಲಿ ಸ್ಪೀಕರ್​ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದರು. ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಶಾಸಕ ಉಮೇಶ್ ಜಾಧವ್ ಅವರ​ ರಾಜೀನಾಮೆಗೆ ಅಂಗೀಕಾರ ದೊರೆಯುವುದು ಅನುಮಾನ ಅಂತ ಸ್ಪೀಕರ್ ರಮೇಶ್​ ಕುಮಾರ್ ಅವರು ಕೋಲಾರದಲ್ಲಿ ಹೇಳಿಕೆ ನೀಡಿದ್ದರು. ಜಾಧವ್ ಅವರು ರಾಜೀನಾಮೆಗೆ ಸ್ಪಷ್ಟ ಕಾರಣ ನೀಡದೆ ಇರುವುದರಿಂದ ರಾಜೀನಾಮೆ ಅಂಗೀಕಾರ ಕಷ್ಟ ಎಂದು ಸ್ಪೀಕರ್ ಹೇಳಿದ್ದರು. ಇದೀಗ ಜಾಧವ್ ರಾಜೀನಾಮೆ ಅಂಗೀಕಾರವಾಗಿದೆ. ಎಲ್ಲರಲ್ಲೂ ಜಾಧವ್ ರಾಜೀನಾಮೆ ಅಂಗೀಕಾರ ಆಗುತ್ತದೋ, ಇಲ್ಲವೋ ಎಂಬ ಕುತೂಹಲವಿತ್ತು. ಜಾಧವ್​ ಮಾತ್ರ ಖಂಡಿತಾ ತಮ್ಮ ರಾಜೀನಾಮೆ ಅಂಗೀಕಾರವಾಗುತ್ತದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

RELATED ARTICLES

Related Articles

TRENDING ARTICLES