ಮೈಸೂರು : ಮೈತ್ರಿ ಅಭ್ಯರ್ಥಿಯೇ ತನ್ನ ಎದುರಾಳಿ ಬಿಜೆಪಿ ಪರ ವೋಟ್ ಕೇಳಿದ್ದಾರೆ ಅಂದ್ರೆ ನೀವು ನಂಬುತ್ತೀರಾ..? ಸಾಧ್ಯನೇ ಇಲ್ಲ. ತನ್ನ ಪರ, ತನ್ನ ಪಕ್ಷದ ಪರ ಮತಯಾಚಿಸೋದು ಬಿಟ್ಟು ತನ್ನ ಪ್ರತಿಸ್ಪರ್ಧಿ ಪರ ಯಾರ್ ತಾನೆ ವೋಟ್ ಕೇಳ್ತಾರೆ?
ಆದ್ರೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಬಿಜೆಪಿಗೆ ವೋಟ್ ಕೇಳಿದ್ದಾರೆ..! ಹಾಗಂತ ಇದು ಅವರು ತನ್ನ ಪಕ್ಷದ ವಿರುದ್ಧ ಮುನಿಸಿಕೊಂಡು, ತಾನು ಕಣದಿಂದ ಹಿಂದೆ ಸರಿದು ಮತಯಾಚನೆ ಮಾಡಿರೋದಲ್ಲ..! ಬದಲಾಗಿ ತನ್ನ ಪರ ಮತ ಯಾಚಿಸುವ ಭರದಲ್ಲಿ ಮಾಡಿಕೊಂಡಿರೋ ಯಡವಟ್ಟು..!
ಕೊಡಗಿನ ಸಿದ್ದಾಪುರದಲ್ಲಿ ಪ್ರಚಾರದ ವೇಳೆ ವಿಜಯ ಶಂಕರ್, ‘ನನ್ನ ಗುರುತು ಕಮಲ. ಅದಕ್ಕೆ ಮುದ್ರೆ ಒತ್ತಿ’ ಎಂದು ಮತಯಾಚಿಸಿದ್ರು..! ಬಳಿಕ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಂಡ್ರು.
ವಿಜಯ್ ಶಂಕರ್ ಅವರು ಮೈತ್ರಿ ಅಭ್ಯರ್ಥಿಯಾಗಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸ್ಪರ್ಧಿಸ್ತಾ ಇದ್ದಾರೆ. 1998 ಮತ್ತು 2004ರಲ್ಲಿ ಬಿಜೆಪಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.