ಚೆನ್ಮೈ : ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಪ್ರದರ್ಶನವನ್ನು ಮುಂದುವರೆಸಿದ್ದರೆ, ಅತ್ತ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ‘ಚಾಂಪಿಯನ್’ ಆಟವನ್ನು ಮುಂದುವರೆಸಿದೆ.
ರಾಜಸ್ಥಾನ್ ರಾಯಲ್ಸ್ ಎದುರಿನ ಮ್ಯಾಚ್ ನಲ್ಲಿ ಧೋನಿ ಪಡೆ ‘ಸೂಪರ್’ ಗೆಲುವು ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಧೋನಿ ಅಬ್ಬರದ ಅರ್ಧಶತಕ (ಅಜೇಯ 75) ಹಾಗೂ ಸುರೇಶ್ ರೈನಾ (36), ಬ್ರಾವೋ (27) ಅವರ ಉತ್ತಮ ಆಟದ ನೆರವಿನಿಂದ ತನ್ನ ಪಾಲಿನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಪೇರಿಸಿತು.
ಗುರಿ ಬೆನ್ನತ್ತಿದ ಆರ್ ಆರ್ ಗೆ ಉತ್ತಮ ಆರಂಭ ಸಿಗಲಿಲ್ಲ.ಆದರೆ, ಮಧ್ಯಮ ಕ್ರಮಾಂಕದಲ್ಲಿ ತ್ರಿಪತಿ (39), ಸ್ಮಿತ್ (28) ತಕ್ಕಮಟ್ಟಿನ ಆಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮ ಒಂದು ಹಂತದಲ್ಲಿ ಸ್ಟ್ರೋಕ್ (26 ಎಸೆತಗಳಲ್ಲಿ 46) ಮತ್ತು ಜೋಫ್ರಾ ಅರ್ಚರ್ ( 11 ಎಸೆತಗಳಲ್ಲಿ 24) ರನ್ ಗಳಿಸಿ ವಿಜಯಲಕ್ಷ್ಮಿಯನ್ನು ತಮ್ಮ ತಂಡದತ್ತ ಮುಖಮಾಡುವಂತೆ ಮಾಡಿದರಾದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರ್ ಆರ್ 8 ರನ್ ಗಳಿಂದ ಸೋಲುಂಡಿತು.