Sunday, December 8, 2024

ನಿಖಿಲ್ ನಾಮಪತ್ರ ಗೊಂದಲ: ಡಿಸಿ ಕಚೇರಿಯಲ್ಲಿ ವಿಚಾರಣೆ

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರದಲ್ಲಿ ಗೊಂದಲವಿರುವ ಸಂಬಂಧ ಪ್ರಕರಣದ ಬಗ್ಗೆ ಇಂದು ಬೆಳಗ್ಗೆ 11 ಗಂಟೆಗೆ ಮಂಡ್ಯ ಡಿಸಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಮೈಸೂರಿನ ಪ್ರಾದೇಶಿಕ ಆಯುಕ್ತರು ಈ ಬಗ್ಗೆ ವಿಚಾರಣೆ ನಡೆಸಲಿದ್ದಾರೆ. ನಿಖಿಲ್ ಸಲ್ಲಿಸಿದ ಫಾರ್ಮ್ ನಂಬರ್ 26 ರಲ್ಲಿ ಲೋಪ ಕಂಡು ಬಂದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಮಲತಾ ಅಂಬರೀಶ್ ಅವರ ಚುನಾವಣಾ ಏಜೆಂಟ್ ಮದನ್ ಅವರು ನಿಖಿಲ್ ನಾಮಪತ್ರ ತಿರಸ್ಕರಿಸುವಂತೆ ದೂರು ನೀಡಿದ್ದರು.

ನಿಖಿಲ್ ನಾಮಪತ್ರ ಗೊಂದಲಕ್ಕೆ ಸಂಬಂಧಿಸಿ ಸುಮಲತಾ ಚುನಾವಣಾ ಏಜೆಂಟ್ ಮದನ್‌ ಅವರಿಗೆ ಚುನಾವಣಾ ವೀಕ್ಷಕ ರಂಜಿತ್ ಕುಮಾರ್ ವಿವರಣೆ‌ ನೀಡಿದ್ದರು. ಮತ್ತೊಬ್ಬ ವೀಕ್ಷಕರಾದ ರಾಣಿ ನಗರ್ ಸಮ್ಮುಖದಲ್ಲಿ ನಾಮಪತ್ರ ಪರಿಶೀಲನೆ ನಡೆದಿದೆ. “ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿಗಳು  ಚುನಾವಣಾ ಏಜೆಂಟರು ಉಪಸ್ಥಿತರಿದ್ದರು. ಯಾವುದೇ ಸಮಸ್ಯೆ ಇರಲಿಲ್ಲ. ಆ ಸಂದರ್ಭದಲ್ಲಿ ನೀವು ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದು ರಂಜಿತ್ ಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES