ಗ್ರೌಂಡ್ ರಿಪೋರ್ಟ್ 7 : ಮೈಸೂರು – ಕೊಡಗು ಲೋಕಸಭಾ ಕ್ಷೇತ್ರ
ಮೈಸೂರು : ‘ಕೇಸರಿ’ ಕಲಿ ಪ್ರತಾಪ್ ಸಿಂಹ ಮತ್ತು ‘ಕೈ’ ರಣಕಲಿ ಸಿ.ಹೆಚ್ ವಿಜಯ ಶಂಕರ್ ನಡುವಿನ ಹಣಾಹಣಿಗೆ ಸಾಕ್ಷಿಯಾಗಿದೆ ಮೈಸೂರು -ಕೊಡಗು ಕ್ಷೇತ್ರ. ‘ದೋಸ್ತಿ’ ಜೆಡಿಎಸ್ ಈ ಕ್ಷೇತ್ರ ತನಗೆ ಬೇಕು ಅಂತ ಕೇಳಿಕೊಂಡಿತ್ತು. ಆದರೆ, ಕಾಂಗ್ರೆಸ್ ತನ್ನ ಸಂಸದರಿರುವ ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಮೈಸೂರನ್ನು ತನಗೇ ಉಳಿಸಿಕೊಂಡಿದೆ.
ಈ ಕ್ಷೇತ್ರ ಮಾಜಿ ಸಿಎಂ, ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರ ಪ್ರತಿಷ್ಠೆಗೆ ಸಾಕ್ಷಿಯಾಗಿರುವ ರಣಕಣ ಇದಾಗಿದ್ದು, ಕೇಸರಿ ‘ಪ್ರತಾಪ’ದ ವಿರುದ್ಧ ‘ಕೈ’ಗೂಡುತ್ತಾ ದೋಸ್ತಿ ತಂತ್ರ ಅನ್ನೋದನ್ನು ಕಾದುನೋಡಬೇಕಿದೆ.
ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ, 3ರಲ್ಲಿ ಜೆಡಿಎಸ್, 1ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಇರೋದ್ರಿಂದ ಬಿಜೆಪಿ ಹಾಗೂ ಮೈತ್ರಿ ಸಮನಾದ ಶಾಸಕರ ಬಲವನ್ನು ಹೊಂದಿದೆ,
ಮೈಸೂರು ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು
ಕೃಷ್ಣರಾಜ- ಬಿಜೆಪಿ- ಎಸ್.ಎ. ರಾಮದಾಸ್
ಚಾಮರಾಜ – ಬಿಜೆಪಿ – ಎಲ್. ನಾಗೇಂಧ್ರ
ಪಿರಿಯಾಪಟ್ಟಣ- ಜೆಡಿಎಸ್ – ಕೆ. ಮಹದೇವ್
ನರಸಿಂಹರಾಜ – ಕಾಂಗ್ರೆಸ್ – ಶಿಕ್ಷಣ ಸಚಿವ ತನ್ವೀರ್ ಸೇಠ್
ಚಾಮುಂಡೇಶ್ವರಿ – ಜೆಡಿಎಸ್ – ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ
ಹುಣಸೂರು – ಜೆಡಿಎಸ್ – ಹೆಚ್. ವಿಶ್ವನಾಥ್
ಕೊಡಗು ಅಸೆಂಬ್ಲಿ ಕ್ಷೇತ್ರಗಳು
ಮಡಿಕೇರಿ – ಬಿಜೆಪಿ – ಅಪ್ಪಚ್ಚು ರಂಜನ್
ವಿರಾಜಪೇಟೆ – ಬಿಜೆಪಿ- ಕೆ.ಜಿ. ಬೋಪಯ್ಯ
13 ಬಾರಿ ಕಾಂಗ್ರೆಸ್ 3 ಬಾರಿ ಮಾತ್ರ ಬಿಜೆಪಿ
ಇದುವರೆಗೆ ನಡೆದ ಲೋಕ ಸಮರದಲ್ಲಿ 13 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು, 3 ಬಾರಿ ಬಿಜೆಪಿ ಅಭ್ಯರ್ಥಿಗಳು ಯಶ ಕಂಡಿದ್ದಾರೆ. ಈ ಬಾರಿ ಸಂಸದ ಪ್ರತಾಪ್ ಸಿಂಹ ಅವರ ಎದುರು ಕಾಂಗ್ರೆಸ್ನಿಂದ ಕಣಕ್ಕೆ ಇಳಿಯುತ್ತಿರುವ ಸಿ. ಹೆಚ್ ವಿಜಯ್ ಶಂಕರ್ ಬಿಜೆಪಿಯಿಂದ 2 ಬಾರಿ ಸಂಸತ್ ಪ್ರವೇಶಿಸಿದವರು.
ಮೈಸೂರು ರಾಜ್ಯ
1951 – ಎನ್ ರಾಚಯ್ಯ, ಕಾಂಗ್ರೆಸ್
1957 – ಎಸ್ಎಂ ಸಿದ್ದಯ್ಯ, ಕಾಂಗ್ರೆಸ್,
1962 – ಎಂ ಶಂಕರಯ್ಯ, ಕಾಂಗ್ರೆಸ್
1967 – ಹೆಚ್.ಡಿ ತುಲಸಿದಾಸ್ ದಾಸಪ್ಪ, ಕಾಂಗ್ರೆಸ್
1971 – ಹೆಚ್.ಡಿ ತುಲಸಿದಾಸ್ ದಾಸಪ್ಪ, ಕಾಂಗ್ರೆಸ್
ಕರ್ನಾಟಕ ರಾಜ್ಯ
1977 – ಹೆಚ್ ಡಿ. ತುಲಸಿದಾಸ್ ದಾಸಪ್ಪ, ಕಾಂಗ್ರೆಸ್
1980 –ಎಂ ರಾಜಶೇಖರ ಮೂರ್ತಿ, ಕಾಂಗ್ರೆಸ್
1984, 1989 – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಕಾಂಗ್ರೆಸ್
1991 – ಚಂದ್ರಪ್ರಭಾ ಅರಸ್, ಕಾಂಗ್ರೆಸ್
1996 – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಕಾಂಗ್ರೆಸ್
1998 – ಸಿ.ಹೆಚ್. ವಿಜಯಶಂಕರ್, ಬಿಜೆಪಿ
1999 – ಶ್ರೀಕಂಠದತ್ತ ನರಸಿಂಹರಾಜ ಒಡೆಯರ್,
2004 – ಸಿ.ಹೆಚ್. ವಿಜಯಶಂಕರ್ ಬಿಜೆಪಿ,
2009 – ಹೆಚ್ ವಿಶ್ವನಾಥ್, ಕಾಂಗ್ರೆಸ್,
2014 – ಪ್ರತಾಪ್ ಸಿಂಹ. ಬಿಜೆಪಿ
ಲೋಕ ಚಿತ್ರಣ-2014
2014 ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 31,608 ಮತಗಳ ಅಂತರದಿಂದ ಹೆಚ್.ವಿಶ್ವನಾಥ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಪ್ರತಾಪ್ ಸಿಂಹ 5,03,908 ಮತಗಳನ್ನು, ಹೆಚ್. ವಿಶ್ವನಾಥ್ 4,72,300 ಮತಗಳನ್ನು ಪಡೆದಿದ್ದರು.
‘ಮತ’ ಗಣಿತ
ಪುರುಷರು 9,36,370
ಮಹಿಳೆಯರು 9,22,641
ಯುವ ಮತದಾರರು 4,00,000
ಒಟ್ಟು 18,59,011
‘ಜಾತಿ’ ಗಣಿತ
ಒಕ್ಕಲಿಗರು 4,50,000
ಕುರುಬರು 2,50,000
ಲಿಂಗಾಯತ 2,25,000
ಎಸ್ಸಿ 2,25,000
ಹಿಂದುಳಿದ ವರ್ಗ 2,50,000
ನಾಯಕ 1,40,000
ಮುಸ್ಲಿ 1,20,000
ಕೊಡವರು 1,00,000
ಬ್ರಾಹ್ಮಣ 90,000
ಇತರೆ 1,50,000
ಅಭ್ಯರ್ಥಿಗಳ ಬಲಾಬಲ
ಪ್ರತಾಪ್ ಸಿಂಹಗೆ ಪೂರಕ ಅಂಶಗಳೇನು?
ಪ್ರಧಾನಿ ನರೇಂದ್ರ ಮೋದಿ ಹವಾ
ಅನುದಾನ ಬಳಸಿಕೊಂಡ ನಂ.1 ಸಂಸದ ಎಂಬ ಹೆಗ್ಗಳಿಕೆ
ಮೈಸೂರು, ಕೊಡಗು ವ್ಯಾಪ್ತಿಯಲ್ಲಿ ಭಾರೀ ಜನಪ್ರಿಯತೆ
ಟಿಕೆಟ್ ವಿಚಾರದಲ್ಲಿ ಯಾವುದೇ ಭಿನ್ನಮತ ಇಲ್ಲ
ಬಹುತೇಕ ಯುವ ಮತದಾರರಲ್ಲಿ ಮೋದಿ ಹವಾ
4 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದು
ಪ್ರತಾಪ್ ಸಿಂಹಗೆ ಇರುವ ಆತಂಕವೇನು?
ಕಳೆದ ಬಾರಿ ಜೆಡಿಎಸ್ ಬೆಂಬಲ ಇತ್ತು
ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನ
ಜನಸಾಮಾನ್ಯರ ಕೈಗೆ ಸಿಗಲ್ಲ ಎಂಬ ಆರೋಪ
ಕೊಡಗಿನ ಮಳೆಹಾನಿ ವಿಚಾರದಲ್ಲಿ ಸ್ಪಂದಿಸಿಲ್ಲ ಎಂಬ ಆರೋಪ
ಸಿ.ಹೆಚ್. ವಿಜಯಶಂಕರ್ ಗೆ ಪೂರಕ ಅಂಶಗಳೇನು?
ಸಿ.ಹೆಚ್. ವಿಜಯಶಂಕರ್ ಬೆನ್ನಹಿಂದೆ ಸಿದ್ದರಾಮಯ್ಯ ಗಟ್ಟಿಯಾಗಿ ನಿಂತಿರುವುದು
ಸಿದ್ದರಾಮಯ್ಯಗೆ ಈ ಎಲೆಕ್ಷನ್ ಪ್ರತಿಷ್ಠೆ.
ಹೀಗಾಗಿ ಸಿದ್ದರಾಮಯ್ಯ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುತ್ತಿರುವುದು
ಜಾತಿ ಲೆಕ್ಕಾಚಾರ ಕೈ ಹಿಡಿಯುವ ಸಾಧ್ಯತೆ
ಈ ಹಿಂದೆ 2 ಸಲ ಕ್ಷೇತ್ರದ ಸಂಸದರಾಗಿರುವ ಅನುಭವ
ಸಿ.ಹೆಚ್. ವಿಜಯಶಂಕರ್ ಗೆಆತಂಕವೇನು?
ಚಾಮುಂಡೇಶ್ವರಿ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಹೊರಬರದೇ ಇರುವುದು
ಜಿ.ಟಿ. ದೇವೇಗೌಡ, ಸಿದ್ದರಾಮಯ್ಯ ಒಂದಾಗದಿದ್ದರೆ ಗೆಲ್ಲೋದು ಕಷ್ಟ
ಇಬ್ಬರೂ ಮುಖಂಡರ ಬೆಂಬಲಿಗರಲ್ಲಿ ಬೂದಿಮುಚ್ಚಿದ ಕೆಂಡದಂತಹ ವಾತಾವರಣ ಇರುವುದು
ಹಾವು-ಮುಂಗುಸಿಯಂತೆಯೇ ಇರುವ ಕಾಂಗ್ರೆಸ್, ಜೆಡಿಎಸ್ ಮುಖಂಡರು
ದಲಿತ ಮತಗಳು ವಿಭಜನೆಯಾಗುವ ಆತಂಕ
ಜೆಡಿಎಸ್ ಮತಗಳು ಕಾಂಗ್ರೆಸ್ಗೆ ವರ್ಗಾವಣೆಯಾಗುತ್ತವೆಯೇ ಎಂಬ ಆತಂಕ
ಯುವಸಮೂಹವನ್ನು ಸೆಳೆದಿರುವ ಮೋದಿ ಹವಾ
ಪ್ರಭಾವ ಬೀರುವ ಅಂಶಗಳು
ಇಲ್ಲಿ ಚುನಾವಣೆ ನಡೆಯುವುದು ಜಾತಿ ಲೆಕ್ಕಾಚಾರದ ಮೇಲೆಯೇ
ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರ ಮತಗಳು ನಿರ್ಣಾಯಕ
ಎಂದಿನಂತೆ ಮೇಲ್ವರ್ಗದ ಮತಗಳು ಬಿಜೆಪಿ ಬುಟ್ಟಿಗೆ ಬೀಳುವ ಸಾಧ್ಯತೆ
ಅಹಿಂದ ಮತಗಳು ಕಾಂಗ್ರೆಸ್ ಪಾಲಾಗುವ ನಿರೀಕ್ಷೆ
ಹಳೇ ಮೈಸೂರು ವಿಭಾಗದಲ್ಲಿ ಜೆಡಿಎಸ್ ಮತಗಳು ಅತ್ಯಂತ ನಿರ್ಣಾಯಕ
ಸಂಸದರು ಮಾಡಿದ್ದೇನು?(ಅನುದಾನ ಬಳಕೆ)
ಮೈಸೂರು-ಬೆಂಗಳೂರು ಜೋಡಿ ರೈಲು ಹಳಿ ಉದ್ಘಾಟನೆ
ಮೈಸೂರಿಗೆ ಪಾಸ್‌ಪೋರ್ಟ್ ಸೇವಾ ಕೇಂದ್ರ ತೆರೆದ ಹೆಗ್ಗಳಿಕೆ
ಮೈಸೂರು-ಬೆಂಗಳೂರು ನಡುವೆ ಸಂಜೆ 6.30ಕ್ಕೆ ವಿಶ್ವಮಾನವ ಎಕ್ಸ್‌ಪ್ರೆಸ್ ಸಂಚಾರ
ಮೈಸೂರು-ಉದಯಪುರ ಪ್ಯಾಲೇಸ್ ಕ್ವೀನ್, ಮೈಸೂರು-ವಾರಾಣಸಿ ರೈಲು ಆರಂಭ
ದೇಶದ ಮೊದಲ ಬ್ರೈಲ್ ಎನೇಬಲ್ಡ್ ಸ್ಟೇಷನ್ ಎಂಬ ಖ್ಯಾತಿಗೆ ಮೈಸೂರು ನಿಲ್ದಾಣ ಪಾತ್ರ
ರೈಲು ನಿಲ್ದಾಣಕ್ಕೆ ಲಿಫ್ಟ್, ಎಲವೇಟರ್, ಬ್ಯಾಟರಿ ಚಾಲಿತ ಕಾರುಗಳು, ಇ-ಟಾಯ್ಲೆಟ್, ಸಬ್ ವೇ ಅಳವಡಿಕೆ
ನಾಗನಹಳ್ಳಿಯಲ್ಲಿ ಅತಿ ದೊಡ್ಡ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ನಿರ್ಮಾಣದ ಘೋಷಣೆ
ವಿಜಯನಗರದಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕುಗಳ ನವೀಕರಣ
78 ಕೋಟಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿ
ಮೈಸೂರಿನ ಹಲವು ಕಡೆಗಳಲ್ಲಿ ಪಾರ್ಕ್ಗಳ ಅಭಿವೃದ್ಧಿ
ಹಿನಕಲ್ ಸಿಗ್ನಲ್‌ಗೆ 19 ಕೋಟಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಾಣ
ಮಡಿಕೇರಿವರೆಗೂ ನಾಲ್ಕು ಪಥದ ಹೈವೆ ನಿರ್ಮಾಣಕ್ಕೆ ಚಿಂತನೆ
ತಂಬಾಕು ಬೆಳೆಗಾರರಿಗೆ ಕೆಜಿಗೆ ಸರಾಸರಿ 135.56 ರೂಪಾಯಿ ಬೆಲೆ ಕೊಡಿಸಿದ ಸಾಧನೆ
ಮೈಸೂರು ಮತ್ತು ಚೆನ್ನೈ ನಡುವೆ ವಿಮಾನ ಸೇವೆ
ಇಎಸ್ಐ ಆಸ್ಪತ್ರೆ ಪೂರ್ಣಗೊಳಿಸಿದ ಹೆಗ್ಗಳಿಕೆ
ಕ್ಷೇತ್ರದ ಪರಿಚಯ
ವಿಶ್ವವಿಖ್ಯಾತ ಜಗನ್ಮೋಹನ ಅರಮನೆ
ಚಾಮುಂಡಿ ಬೆಟ್ಟ, ಶ್ರೀ ಚಾಮರಾಜೇಂದ್ರ ಮೃಗಾಲಯ
ಬಳ್ಳೆ ಆನೆ ಶಿಬಿರ, ಹಳೆ ತಿರುಮಕೂಡಲು
ಅಬ್ಬಿಜಲಪಾತ, ಮಂದಲ್ಪಟ್ಟಿ, ಬಲಮುರಿ, ಗೋಲ್ಡನ್ ಟೆಂಪಲ್