Monday, December 23, 2024

ಡೆಡ್​ಲೈನ್​ ಮುಂಚೆ ನೋಟಿಸ್​​ಗೆ ಉತ್ತರಿಸ್ತಾರಾ ಸುಮಲತಾ..?

ಬೆಂಗಳೂರು: ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿ, ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿ ಡಿಸಿ ನೋಟಿಸ್​ಗೆ ಉತ್ತರ ನೀಡಲು ಸುಮಲತಾ ಅಂಬರೀಶ್ ಅವರಿಗೆ ಇಂದು ಡೆಡ್​ಲೈನ್ ನಿಗದಿಯಾಗಿದೆ. ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿ, ಅವಮಾನಿಸಿದ ಆರೋಪದಲ್ಲಿ ಸುಮಲತಾ ಅವರಿಗೆ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುಶ್ರೀ ನೋಟಿಸ್‌ ಕಳುಹಿಸಿದ್ದರು. 24 ಗಂಟೆಯೊಳಗೆ ಉತ್ತರ ನೀಡಲು ನೋಟಿಸ್​​ನಲ್ಲಿ ಸೂಚನೆ ನೀಡಲಾಗಿದ್ದು, ಐಪಿಸಿ ಸೆಕ್ಷನ್ 189ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆಯೂ ತಿಳಿಸಲಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಕಳುಹಿಸಿರುವ ನೋಟಿಸ್​ಗೆ ಸುಮಲತಾ ಅವರು ಇಂದು ಉತ್ತರ ನೀಡ್ತಾರಾ ಅಂತ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES