Wednesday, January 22, 2025

ಇವಿಎಂನಲ್ಲಿ ಸುಮಲತಾಗೆ 20ನೇ, ನಿಖಿಲ್​ಗೆ 1ನೇ ಕ್ರಮ ಸಂಖ್ಯೆ..!

ಬೆಂಗಳೂರು: ಮತಯಂತ್ರದಲ್ಲಿ‌ ಸುಮಲತಾ 20ನೇ, ನಿಖಿಲ್​ಗೆ 1ನೇ ಕ್ರಮ ಸಂಖ್ಯೆ ನೀಡಲಾಗಿದೆ. ಸುಮಲತಾ ಅಂಬರೀಶ್ ಅವರ ಹೆಸರಿನ​ ಹಿಂದೆ‌ ಎರಡು ಮತ್ತು ಮುಂದೆ ಒಂದು ಸುಮಲತಾ ಹೆಸರು ಬರುವಂತೆ ಮಾಡಲಾಗಿದೆ. ಕ್ರಮ ಸಂಖ್ಯೆ 19ರಿಂದ 22ನೇ ಕ್ರಮ ಸಂಖ್ಯೆವರೆಗೆ ಒಟ್ಟು 4 ಸುಮಲತಾ ಹೆಸರುಗಳು ಬರಲಿವೆ. ಕ್ರಮ ಸಂಖ್ಯೆ ನೀಡುವ ಸಂಬಂಧ ಸರ್ಕಾರ ಚುನಾವಣಾಧಿಕಾರಿಗೆ ಒತ್ತಡ ಹೇರಿತು ಎಂಬ ಮಾತುಗಳೂ ಕೇಳಿ ಬರ್ತಿವೆ. ಮತದಾರರಲ್ಲಿ ಗೊಂದಲ ಮೂಡಿಸುವುದಕ್ಕಾಗಿ ಉದ್ದೇಶಪೂರ್ವಕವಾಗಿ ಸರ್ಕಾರ ಈ ತಂತ್ರ ಹೂಡಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಹೆಚ್ಚಿದ್ದು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ. ಈ ನಡುವೆ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಸಿಂಧು ಎನ್ನಲಾಗಿತ್ತು. ಜಿಲ್ಲಾಡಳಿತದ ವಿರುದ್ಧ ಹೇಳಿಕೆ ನೀಡಿ, ಅವಮಾನಿಸಿದ ಆರೋಪಕ್ಕೆ ಸಂಬಂಧಿಸಿ ಡಿಸಿ ನೋಟಿಸ್​ಗೆ ಉತ್ತರ ನೀಡಲು ಸುಮಲತಾ ಅಂಬರೀಶ್ ಅವರಿಗೂ ಇಂದು ಡೆಡ್​ಲೈನ್ ನಿಗದಿಯಾಗಿದೆ.

RELATED ARTICLES

Related Articles

TRENDING ARTICLES