Monday, December 23, 2024

ತವರಲ್ಲೂ ಆರ್​ಸಿಬಿಗೆ ಮುಖಭಂಗ..!

ಬೆಂಗಳೂರು : ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಪ್ರದರ್ಶನವನ್ನೇ ಮುಂದುವರೆಸಿದೆ. 12ನೇ ಆವೃತ್ತಿಯ ಐಪಿಎಲ್​ನಲ್ಲಿ ತಾನಾಡಿದ 2ನೇ ಮ್ಯಾಚ್​ನಲ್ಲೂ ಆರ್​ಸಿಬಿ ಸೋಲನುಭವಿಸಿದೆ.
ಆರ್​ಸಿಬಿ ತನ್ನ ತವರು ನೆಲ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ 6ರನ್​ಗಳಿಂದ ಸೋತಿತು. ಟಾಸ್​ ಗೆದ್ದ ಆರ್​ಸಿಬಿ ನಾಯಕ ವಿರಾಟ್​ ಮುಂಬೈಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಕ್ಯಾಪ್ಟನ್ ರೋಹಿತ್ ಶರ್ಮಾ (48) ಮತ್ತು ವಿಕೆಟ್​ ಕೀಪರ್ ಡಿ.ಕಾಕ್ (23) ಉತ್ತಮ ಆರಂಭ ಒದಗಿಸಿದ್ರು. ಈ ಜೋಡಿ 54 ರನ್ ಗಳ ಜೊತೆಯಾಟವಾಡಿತು. ಸೂರ್ಯಕುಮಾರ್ ಯಾದವ್ 38, ಯುವರಾಜ್ ಸಿಂಗ್ 23, ಹಾರ್ದಿಕ್ ಪಾಂಡ್ಯ 32ರನ್​ಗಳ ಕೊಡುಗೆ ನೀಡಿದ್ರು. ಅಂತಿಮವಾಗಿ ಮುಂಬೈ ತನ್ನ ಪಾಲಿನ 20 ಓವರ್ ಗಳಲ್ಲಿ 187ರನ್ ಬಾರಿಸಿತು. ಆರ್​ಸಿಬಿ ಪರ ಚಹಲ್ 4 ವಿಕೆಟ್​ ಹಾಗೂ ಉಮೇಶ್ ಯಾದವ್, ಮಹಮ್ಮದ್ ಸಿರಾಜ್ ತಲಾ 2 ವಿಕೆಟ್ ಪಡೆದು ಮಿಂಚಿದ್ರು.
ಗುರಿ ಬೆನ್ನತ್ತಿದ ಆರ್​ಸಿಬಿ 27ರನ್​ ಗಳಿಸುವಷ್ಟರಲ್ಲಿ ಮೊಯಿನ್ ಅಲಿ (13) ವಿಕೆಟ್​ ಕಳೆದು ಕೊಂಡಿತು. ಆದರೆ, ಪಾರ್ಥಿವ್ ಪಾಟೀಲ್​ 31, ನಾಯಕ ವಿರಾಟ್​ ಕೊಹ್ಲಿ 46 ಹಾಗೂ ಎಬಿ ಡಿವಿಲಯರ್ಸ್ ಅಜೇಯ 70ರನ್​ ಗಳಿಸಿ ಗೆಲುವಿನ ದಡ ಸೇರಿಸೋ ಪ್ರಯತ್ನ ಮಾಡಿದ್ರು. ಕೊನೇ ಹಂತದಲ್ಲಿ ಪಂದ್ಯ ಸಂಪೂರ್ಣ ಮುಂಬೈ ತೆಕ್ಕೆಯಲ್ಲಿದ್ದಾಗ ಎಬಿಡಿ ಆರ್​ಸಿಬಿಯತ್ತ ವಿಜಯಲಕ್ಷ್ಮೀಯ ಚಿತ್ತವನ್ನು ತಿರುಗಿಸಿದ್ರು. ಆದರೆ, ಬೂಮ್ರಾ, ಮಲಿಂಗ ಅಂತಿಮ ಎರಡು ಓವರ್ ಗಳಲ್ಲಿ ಅತ್ಯುತ್ತಮ ಬಾಲ್​ ಗಳನ್ನು ಎಸೆದು ಆರ್​ಸಿಬಿಯಿಂದ ಗೆಲುವು ಕಸಿದುಕೊಂಡರು.
ಆರ್​ಸಿಬಿ ತನ್ನ ಮೊದಲ ಮ್ಯಾಚ್​ನಲ್ಲಿ ಚೆನ್ನೈಸೂಪರ್ ಕಿಂಗ್ಸ್​ ವಿರುದ್ಧವೂ ಸೋತಿತ್ತು. ಈಗ ತವರಿನಲ್ಲೂ ಮುಖಭಂಗ ಅನುಭವಿಸಿದೆ.

RELATED ARTICLES

Related Articles

TRENDING ARTICLES