Monday, December 23, 2024

ಗ್ರೌಂಡ್​ ರಿಪೋರ್ಟ್ : ಮತ್ತೆ ‘ಕೈ’ ‘ಧ್ರುವ’ತಾರೆಯೋ? ಕಮಲಕ್ಕೆ ‘ಪ್ರಸಾದ’ವೋ?

ಗ್ರೌಂಡ್​ ರಿಪೋರ್ಟ್ 6 : ಚಾಮರಾಜನಗರ ಲೋಕಸಭಾ ಕ್ಷೇತ್ರ
ಚಾಮರಾಜ ನಗರ : ಅತ್ಯಂತ ಕುತೂಹಲ ಮೂಡಿಸಿರುವ ಲೋಕಸಭಾ ಕ್ಷೇತ್ರಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರವೂ ಒಂದು. ಮೈಸೂರಿಗೆ ಹೊಂದಿಕೊಂಡಿರುವ ಈ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಇಲ್ಲಿ ಒಂದೇ ಒಂದು ಬಾರಿಯೂ ‘ಕಮಲ’ ಅರಳಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಆರ್​. ಧ್ರುವನಾರಾಯಣ್ ಮತ್ತು ಬಿಜೆಪಿ ಕ್ಯಾಂಡಿಡೇಟ್​ ವಿ.ಶ್ರೀನಿವಾಸ ಪ್ರಸಾದ್​ ನಡುವಿನ ಹಣಾಹಣಿಗೆ ಚಾಮರಾಜ ನಗರ ವೇದಿಕೆಯಾಗಿದೆ. ಆರ್.ಧ್ರುವನಾರಾಯಣ್ ಅವರು 2 ಬಾರಿ ಸಂಸದರಾಗಿದ್ದು, 3 ನೇ ಬಾರಿ ಸಂಸತ್​ ಪ್ರವೇಶಿಸಲು ಉತ್ಸುಕರಾಗಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್ ಅವರು 1980, 1984, 1989, 1991 ರಲ್ಲಿ ಒಟ್ಟು ನಾಲ್ಕು ಬಾರಿ ಕಾಂಗ್ರೆಸ್​ನಿಂದ ಹಾಗೂ 1999ರಲ್ಲಿ ಜನತಾದಳದಿಂದ ಸಂಸತ್ ಪ್ರವೇಶಿಸಿದ್ದರು. ಆರ್​.ಧ್ರುವನಾರಾಯಣ್ ಹಾಗೂ ವಿ. ಶ್ರೀನಿವಾಸ್​ ಪ್ರಸಾದ್ ಅವರಲ್ಲದೆ ಬಿಎಸ್​ಪಿಯಿಂದ ಡಾ.ಶಿವಕುಮಾರ್ ಅವರೂ ಕಣದಲ್ಲಿದ್ದಾರೆ.
ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್​, 2 ಬಿಜೆಪಿ, 1 ಬಿಎಸ್​ಪಿ, 1 ಜೆಡಿಎಸ್​ ಶಾಸಕರಿದ್ದಾರೆ.

ವಿಧಾಸಭಾ ಕ್ಷೇತ್ರಗಳು ಮತ್ತು ಶಾಸಕರು
ಚಾಮರಾಜನಗರ – ಕಾಂಗ್ರೆಸ್​ (ಸಿ.ಪುಟ್ಟರಂಗಶೆಟ್ಟಿ)

ಕೊಳ್ಳೇಗಾಲ – ಬಿಎಸ್​ಪಿ (ಎನ್. ಮಹೇಶ್)

ಹನೂರು – ಕಾಂಗ್ರೆಸ್​​ (ಆರ್. ನರೇಂದ್ರ)

ಗುಂಡ್ಲುಪೇಟೆ – ಬಿಜೆಪಿ (ಸಿ.ಎಸ್. ನಿರಂಜನ್ ಕುಮಾರ್)

ಮೈಸೂರು – ಜಿಲ್ಲೆ ನಾಲ್ಕು ಕ್ಷೇತ್ರಗಳು

ನಂಜನಗೂಡು – ಬಿಜೆಪಿ (ಹರ್ಷವರ್ಧನ್)

ವರುಣ – ಕಾಂಗ್ರೆಸ್​ (ಡಾ.ಯತೀಂದ್ರ)

ಹೆಚ್.ಡಿ. ಕೋಟೆ – ಕಾಂಗ್ರೆಸ್​ (ಅನಿಲ್​ ಚಿಕ್ಕಮಾದು )

ಟಿ. ನರಸೀಪುರ – ಜೆಡಿಎಸ್ (ಅಶ್ವಿನ್)

ಇನ್ನು ಲೋಕಸಭಾ ಚುನಾವಣೆಯ ಇತಿಹಾಸವನ್ನು ನೋಡಿದ್ರೆ ಕಾಂಗ್ರೆಸ್​ ಇದುವರೆಗೆ ಕಾಂಗ್ರೆಸ್​ 12 ಬಾರಿ, 4 ಬಾರಿ ಜನತಾದಳ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮೈಸೂರು ರಾಜ್ಯ
1951 – ಎನ್​. ರಾಚಯ್ಯ, ಕಾಂಗ್ರೆಸ್
1957,1962,1967, 1971 ಎಸ್​.ಎಂ ಸಿದ್ದಯ್ಯ, ಕಾಂಗ್ರೆಸ್
ಕರ್ನಾಟಕ ರಾಜ್ಯ
1977 – ಬಿ.ರಾಚಯ್ಯ, ಕಾಂಗ್ರೆಸ್
1980, 1984,1989.1991 : ಶ್ರೀನಿವಾಸ ಪ್ರಸಾದ್​, ಕಾಂಗ್ರೆಸ್
1996,1998 : ಸಿದ್ದರಾಜು ಎ ಜನತಾದಳ
1999 : ಶ್ರೀನಿವಾಸ ಪ್ರಸಾದ್, ಜನತಾದಳ (ಯನೈಟೆಡ್​)
2004 : ಎಂ. ಶಿವಣ್ಣ – ಜನತಾದಳ (ಸೆಕ್ಯುಲರ್)
2009, 2014 : ಆರ್.ಧ್ರುವನಾರಾಯಣ್, ಕಾಂಗ್ರೆಸ್​

2014ರ ‘ಲೋಕ’ಸಮರ
ಕಾಂಗ್ರೆಸ್ ನ ಆರ್.ಧ್ರುವನಾರಾಯಣ ಅವರು, ಬಿಜೆಪಿಯ ಎ.ಆರ್. ಕೃಷ್ಣಮೂರ್ತಿ ಅವರ ವಿರುದ್ಧ 1,41,182 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಆರ್. ಧ್ರುವನಾರಾಯಣ್ ಅವರಿಗೆ 5,67,782 ಮತಗಳು, ಎ.ಆರ್. ಕೃಷ್ಣಮೂರ್ತಿ 4,26,600 ಮತಗಳನ್ನು ಪಡೆದಿದ್ದರು.
‘ಮತ’ ಗಣಿತ
ಪುರುಷರು 8,34,392
ಮಹಿಳೆಯರು 8,32,541
ಒಟ್ಟು 16,66,933

‘ಜಾತಿ’ ಗಣಿತ
ಲಿಂಗಾಯತ 4,50,000
ಎಸ್​​ಸಿ 4,00,000
ನಾಯಕ 3,00,000
ಕುರುಬ 1,40,000
ಮುಸ್ಲಿಂ 70,000
ಉಪ್ಪಾರ 1,20,000
ವಕ್ಕಲಿಗ 40,000
ಇತರೆ 2,00,000

ಅಭ್ಯರ್ಥಿಗಳ ಬಲಾಬಲ
ಧ್ರುವನಾರಾಯಣ್​​ಗೆ ಪೂರಕ ಅಂಶಗಳೇನು?
ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಕಟ್ಟಿಕೊಂಡಿದ್ದ ಜಿಲ್ಲೆಯಲ್ಲಿ ಬದಲಾವಣೆ ಗಾಳಿ
ವೀರಪ್ಪನ್​ ಸಾವಿನ ಬಳಿಕ ಇತ್ತೀಚಿನ ದಿನಗಳಲ್ಲಿ ಪ್ರಗತಿ ಕಂಡುಬರುತ್ತಿದೆ
ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಭಾರೀ ಬದಲಾವಣೆಯಾಗಿರುವುದು
ಜಿಲ್ಲೆಯ 8 ಅಸೆಂಬ್ಲಿ ಕ್ಷೇತ್ರಗಳಿಗೂ 4 ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದಿರುವುದು
ಧ್ರುವನಾರಾಯಣ್​​ ಹೆಚ್ಚಿನ ಕೆಲಸ ಮಾಡಿರುವುದರಿಂದ ಜನರ ಒಲವು
ಸತತ 2 ಬಾರಿ ಸಂಸದರಾಗಿರುವುದರಿಂದ ಜನ ಬೆಂಬಲ ಸಾಧ್ಯತೆ
ಕಳೆದ ಬಾರಿ 1.40 ಲಕ್ಷಕ್ಕೂ ಅಧಿಕ ಮತಗಳಿಂದ ಜಯಸಾಧಿಸಿರುವುದು
ಹೀಗಾಗಿ ಸಹಜವಾಗಿಯೇ ಧ್ರುವನಾರಾಯಣ್​ ಅವರಲ್ಲಿ ಆತ್ಮವಿಶ್ವಾಸ ತುಂಬಿರುವುದು

ಧ್ರುವನಾರಾಯಣ್​​ಗೆ ಇರೋ ಆತಂಕವೇನು?
ಬಿಜೆಪಿಯಿಂದ ಹಿರಿಯ ದಲಿತ ನಾಯಕ ವಿ. ಶ್ರೀನಿವಾಸಪ್ರಸಾದ್​ ಸ್ಪರ್ಧಿಸಿರುವುದು
ಬಹಳ​ ವೈಯಕ್ತಿಕ ವರ್ಚಸ್ಸು ಹೊಂದಿರುವ ನಾಯಕ ಶ್ರೀನಿವಾಸ್​​ ಪ್ರಸಾದ್​
ದಲಿತ ಸಮುದಾಯಗಳು ಹೆಚ್ಚಿನ ಪ್ರಮಾಣದಲ್ಲಿರುವುದು
ಈ ಕ್ಷೇತ್ರ ಕಾಂಗ್ರೆಸ್​ ಪಾಲಾಗಿರುವುದಕ್ಕೆ ಜೆಡಿಎಸ್​​ ಕಾರ್ಯಕರ್ತರಿಗೆ ಅಸಮಾಧಾನ
ನಾಯಕ ಸಮಾಜದ ಮತಗಳು ಇಲ್ಲಿ ನಿರ್ಣಾಯಕ
ಹೀಗಾಗಿ ಬಿ. ಶ್ರೀರಾಮುಲು ಅಬ್ಬರದ ಪ್ರಚಾರ ಮಾಡಿದರೆ ಮತ ಕಳೆದುಕೊಳ್ಳುವ ಭೀತಿ
ಡಾ.ಶಿವಕುಮಾರ್ ಬಿಎಸ್​ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು

ಶ್ರೀನಿವಾಸ್​​ಪ್ರಸಾದ್​​ಗೆ ಪೂರಕ ಅಂಶಗಳೇನು?

ಈ ಹಿಂದೆ ಇದೇ ಕ್ಷೇತ್ರದಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವುದು
ಜಿಲ್ಲೆಯಾದ್ಯಂತ ತಮ್ಮದೇ ಆದ ವೈಯಕ್ತಿಕ ವರ್ಚಸ್ಸು ಹೊಂದಿರುವ ಲೀಡರ್​​
ಜಿಲ್ಲೆಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವುದು
ಶ್ರೀನಿವಾಸ್​​ಪ್ರಸಾದ್​ ಆಯ್ಕೆಗೆ ಬಿಜೆಪಿಲ್ಲಿ ಯಾವುದೇ ಅಸಮಾಧಾನ ಇಲ್ಲ
ಮೋದಿ ಕಾರ್ಡ್​​, ದಲಿತ ಮತ್ತು ಉಪ್ಪಾರ ಸಮುದಾಯದ ಮತಗಳು ನೆರವಾಗಬಹುದು
ಸಾಂಪ್ರದಾಯಿಕ ಮತಗಳೂ ದೂರ ಹೋಗಲ್ಲ ಎನ್ನುವ ಲೆಕ್ಕಾಚಾರ
ಕಾಂಗ್ರೆಸ್​​ ಮತಗಳು ಬಿಎಸ್​​ಪಿಗೆ ಹೋಗುವ ವಿಶ್ವಾಸ ಬಿಜೆಪಿಯದ್ದು
ಬಿಎಸ್​​ಪಿ ಅಭ್ಯರ್ಥಿ ಕಣದಲ್ಲಿರುವುದು

ಶ್ರೀನಿವಾಸಪ್ರಸಾದ್​ಗೆ ಇರುವ ಆತಂಕವೇನು?
ಸತತ 2 ಬಾರಿ ಸಂಸದರಾಗಿರುವ ಧ್ರುವನಾರಾಯಣ್​​ ಮತ್ತೆ ಕಣದಲ್ಲಿರುವುದು
ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸದಿಂದ ಧ್ರುವನಾರಾಯಣ್​​​ ಪರ ಒಲವು ಸಾಧ್ಯತೆ
ಅನಾರೋಗ್ಯ ಮತ್ತು ವಯಸ್ಸಿನ ಅಂತರ ಮುಳುವಾಗುವ ಸಾಧ್ಯತೆ
ಯುವಪೀಳಿಗೆಗೆ ಶ್ರೀನಿವಾಸ್​​ಪ್ರಸಾದ್​​ ಪರಿಚಯ ಕಡಿಮೆ
ಚಾಮರಾಜನಗರ ಕ್ಷೇತ್ರದಲ್ಲಿ ಒಂದು ಬಾರಿಯೂ ‘ಕಮಲ’ ಅರಳದೇ ಇರುವುದು
ಕಾಂಗ್ರೆಸ್​​-ಜೆಡಿಎಸ್​ ಮೈತ್ರಿ ಇರುವುದರಿಂದ ಬಿಜೆಪಿಗೆ ತಲೆನೋವು ಜಾಸ್ತಿ

ಪ್ರಭಾವ ಬೀರುವ ಅಂಶಗಳು
ಇಲ್ಲಿ ಚುನಾವಣೆ ನಡೆಯುವುದು ಜಾತಿ ಆಧಾರದ ಮೇಲೆಯೇ
ಎಂದಿನಂತೆ ಮೇಲ್ವರ್ಗದ ಮತಗಳು ಬಿಜೆಪಿ ಬುಟ್ಟಿಗೆ ಬೀಳುವ ಸಾಧ್ಯತೆ
ಅಹಿಂದ ಮತಗಳು ಕಾಂಗ್ರೆಸ್ ಪಾಲಾಗುವ ನಿರೀಕ್ಷೆ
ಮೀಸಲು ಕ್ಷೇತ್ರವಾದ್ದರಿಂದ ಪರಿಶಿಷ್ಟ ಜಾತಿಯ ಮತಗಳು ಇಬ್ಭಾಗವಾಗಬಹುದು
ಕೇಂದ್ರ ಸರ್ಕಾರದ ವೈಫಲ್ಯಗಳ ಜೊತೆಗೆ ರಾಜ್ಯ ಸರ್ಕಾರದ ವೈಫಲ್ಯಗಳು
ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಪಿಎ ಬಳಿ ದೊರೆತ ಲಂಚದ ಹಣ ಪ್ರಕರಣ
ಕಾಂಗ್ರೆಸ್ ಶಾಸಕರ ನಡುವಿನ ಗಲಾಟೆ

ಸಂಸದರು ಸಾಧಿಸಿದ್ದೇನು?(ಅನುದಾನ ಬಳಕೆ)

429 ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 212 ಅಭಿವೃದ್ಧಿ
ರಾಷ್ಟ್ರೀಯ ಹೆದ್ದಾರಿ 209 ರ ಅಗಲೀಕರಣ ಹಾಗೂ ಅಭಿವೃದ್ಧಿ
ನಂಜನಗೂಡಿನಿಂದ ಚಾಮರಾಜನಗರದವರೆಗಿನ ರಾಷ್ಟ್ರೀಯ ಹೆದ್ದಾರಿ 150/ಎ ಅಭಿವೃದ್ಧಿ
ಕೇಂದ್ರೀಯ ರಸ್ತೆ ನಿಧಿಯಿಂದ ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ
ಚಾಮರಾಜನಗರಕ್ಕೆ ಪಾಸ್ ಪೋರ್ಟ್ ಸೇವಾ ಕೇಂದ್ರ ಮಂಜೂರು
ಚಾಮರಾಜನಗರದಲ್ಲಿ ಸುಸಜ್ಜಿತ ಕೇಂದ್ರೀಯ ವಿದ್ಯಾಲಯ
ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಏಕಲವ್ಯ ಶಾಲೆಗಳ ಪ್ರಾರಂಭ
ಜಿಲ್ಲಾ ಕ್ರೀಡಾಂಗಣದಲ್ಲಿ 5.5 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್​​
ಚಾಮರಾಜನಗರಕ್ಕೆ ಕೃಷಿ ವಿಜ್ಞಾನ ಕಾಲೇಜು ಮಂಜೂರು
ಚಾಮರಾಜನಗರಕ್ಕೆ ಗೂಡ್ಸ್ ರೈಲು
ಚಾಮರಾಜನಗರಕ್ಕೆ ಕಾನೂನು ಕಾಲೇಜು ಮಂಜೂರು
ಚಾಮರಾಜನಗರದಿಂದ ಬೆಂಗಳೂರಿಗೆ ನೇರ ರೈಲು ಸಂಚಾರ
ಮೈಸೂರಿನಿಂದ ಚಾಮರಾಜನಗರಕ್ಕೆ ಹೆಚ್ಚುವರಿ ರೈಲಿನ ಸೌಲಭ್ಯ
ಹೆಚ್.ಡಿ.ಕೋಟೆಯಲ್ಲಿ 9 ಕೋಟಿ ವೆಚ್ಚದಲ್ಲಿ ತಂಬಾಕು ಹರಾಜು ಮಾರುಕಟ್ಟೆ
ಟಿ.ನರಸೀಪುರದಲ್ಲಿ ಕಾರ್ಮಿಕ ವಿಮಾ ಆಸ್ಪತ್ರೆ ನಿರ್ಮಾಣ
ಚಾಮರಾಜಗರದಲ್ಲಿ ವಿಭಾಗೀಯ ಅಂಚೆ ಕಚೇರಿ ಸ್ಥಾಪನೆಗೆ ಕ್ರಮ
ಹೆಚ್.ಡಿ.ಕೋಟೆ ತಾಲೂಕಿನ ಬಿ.ಮಟಕೆರೆ ಗ್ರಾಮ ಅಭಿವೃದ್ಧಿ
ಸಂಸದರ ಅದರ್ಶ ಗ್ರಾಮ ಯೋಜನೆಯಡಿ 39 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
2ನೇ ಹಂತದಲ್ಲಿ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದ ಅಭಿವೃದ್ಧಿಗೆ ಕ್ರಮ
ಚಾಮರಾಜನಗರದಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ

ಕ್ಷೇತ್ರದ ವಿಶೇಷ

ಶ್ರೀ ಮಲೈ ಮಹದೇಶ್ವರ ಬೆಟ್ಟ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರ
ಐತಿಹಾಸಿಕ ಬಿಳಿಗಿರಿರಂಗಸ್ವಾಮಿ ದೇವಾಲಯ
ಬಿಆರ್​ಟಿ ವನ್ಯಜೀವಿಗಳ ಅಭಯಾರಣ್ಯ
ಹಿಮವದ್​​ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನವನ
ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯ
ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಕೆಂಪನಂಜಾಂಬ ದೇಗುಲ
ಮಧ್ಯರಂಗ ದೇಗುಲ, ಹೊಗೇನಕಲ್ ಜಲಪಾತ

RELATED ARTICLES

Related Articles

TRENDING ARTICLES