Friday, December 27, 2024

ನಿಖಿಲ್​ ನಾಮಪತ್ರ ಅಸಿಂಧುವಾಗುತ್ತಾ?

ಮಂಡ್ಯ : ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ನಾಮಪತ್ರ ಅಸಿಂಧುವಾಗುವ ಆತಂಕದಲ್ಲಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಇದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ಹಳೇ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವಧಿ ಮುಗಿದ ಬಳಿಕ ಜಿಲ್ಲಾಧಿಕಾರಿ ಎನ್​. ಮಂಜುಶ್ರೀ ಅವರು ನಿಖಿಲ್ ಅವರನ್ನು ಕರೆಸಿ ಹೊಸ ಮಾದರಿಯಲ್ಲಿ ನಾಮಪತ್ರ ಪಡೆದಿದ್ದರು. ಅವಧಿ ಮುಗಿದ ಮೇಲೆ ಕಾನೂನು ಬಾಹಿರವಾಗಿ ಹೊಸ ಮಾದರಿಯಲ್ಲಿ ನಾಮಪತ್ರವನ್ನು ಡಿ.ಸಿ ಸ್ವೀಕರಿಸಿದ್ದಾರೆ. ಆ ನಾಮಪತ್ರವನ್ನು ಅಸಿಂಧುಗೊಳಿಸಬೇಕು ಅಂತ ಸುಮಲತಾ ಬೆಂಬಲಿಗರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರು ಮಂಡ್ಯಕ್ಕೆ ಆಗಮಿಸಿ, ದೂರುದಾರರೊಡನೆ ಚರ್ಚಿಸಿದ್ದು, ನಿಖಿಲ್ ಅವರ ನಾಮಪತ್ರ ಅಸಿಂಧುವಾಗುವ ಹಾಗೂ ಡಿ.ಸಿ ತಲೆದಂಡವಾಗುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES