Friday, November 22, 2024

ಗ್ರೌಂಡ್​ ರಿಪೋರ್ಟ್ : ಕೋಟೆನಾಡಲ್ಲಿ ‘ಚಂದ್ರೋ’ದಯವೋ..? ‘ನಾರಾಯಣ’ಸ್ತುತಿಯೋ..?

ಗ್ರೌಂಡ್​ ರಿಪೋರ್ಟ್ 5 : ಚಿತ್ರದುರ್ಗ ಲೋಕಸಭಾ ಕ್ಷೇತ್ರ

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ‘ಲೋಕ’ ಕಣ ಕಾವೇರಿದೆ. ಹಾಲಿ ಸಂಸದ ಬಿ.ಎನ್​ ಚಂದ್ರಪ್ಪ ಅವರನ್ನು ಕ್ಷೇತ್ರದ ಮತದಾರರು ಮತ್ತೆ ‘ಕೈ’ ಹಿಡಿಯುತ್ತಾರೋ? ಅಥವಾ ‘ಕಮಲ’ ಕಲಿ ಎ. ನಾರಾಯಣ ಸ್ವಾಮಿ ಅವರಿಗೆ ಆಶೀರ್ವದಿಸುತ್ತಾರೋ ಅನ್ನೋದು ಕುತೂಹಲ. ಕೋಟೆನಾಡಲ್ಲಿ ‘ಚಂದ್ರೋ’ದಯವೋ..? ‘ನಾರಾಯಣ’ಸ್ತುತಿಯೋ..? ಅನ್ನೋದನ್ನು ಕಾದು ನೋಡಬೇಕು.
ಈಗ ಕ್ಷೇತ್ರ ವಿಶ್ಲೇಷಣೆ ಮಾಡೋ ಟೈಮು. ಆ ಬಗ್ಗೆ ಗಮನ ಕೊಡೋದಾದ್ರೆ, ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈ 8 ಕ್ಷೇತ್ರಗಳಲ್ಲಿ 5 ಕಡೆಗಳಲ್ಲಿ ಬಿಜೆಪಿ ಶಾಸಕರು, 2ಕಡೆಗಳಲ್ಲಿ ಕಾಂಗ್ರೆಸ್​ ಶಾಸಕರು, 1 ಕಡೆ ಮಾತ್ರ ಜೆಡಿಎಸ್​ ಶಾಸಕರಿದ್ದಾರೆ. ಆದರೆ, ಲೋಕಸಭಾ ಇತಿಹಾಸ ನೋಡಿದ್ರೆ ಕಾಂಗ್ರೆಸ್​ ಅಭ್ಯರ್ಥಿಗಳದ್ದೇ ಮೇಲು ಗೈ.

ಅಸೆಂಬ್ಲಿ ಕ್ಷೇತ್ರಗಳು ಮತ್ತು ಶಾಸಕರು

ಚಿತ್ರದುರ್ಗ – ಜಿ.ಹೆಚ್ ತಿಪ್ಪ ರೆಡ್ಡಿ, ಬಿಜೆಪಿ
ಹಿರಿಯೂರು  -ಕೆ.ಪೂರ್ಣಿಮಾ , ಬಿಜೆಪಿ
ಮೊಳಕಾಲ್ಮೂರು – ಶ್ರೀರಾಮುಲು, ಬಿಜೆಪಿ
ಹೊಳಲ್ಕರೆ – ಎಂ ಚಂದ್ರಪ್ಪ, ಬಿಜೆಪಿ
ಹೊಸದುರ್ಗ – ಗೂಳಿಹಟ್ಟಿ ಶೇಖರ್, ಬಿಜೆಪಿ
ಚಳ್ಳಕೆರೆ – ಟಿ. ರಘುಮೂರ್ತಿ, ಕಾಂಗ್ರೆಸ್
ಸಿರಾ – (ತುಮಕೂರು ಜಿಲ್ಲೆ) ಬಿ. ಸತ್ಯನಾರಾಯಣ, ಜೆಡಿಎಸ್
ಪಾವಗಡ (ತುಮಕೂರು ಜಿಲ್ಲೆ) ಕಾಂಗ್ರೆಸ್ (ವೆಂಕಟರಾಯಪ್ಪ, ಕಾರ್ಮಿಕ ಸಚಿವ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ)

ಲೋಕ ಸಮರದಿ ‘ಕೈ’ ಮೇಲುಗೈ
ಲೋಕಸಭಾ ಚುನಾವಣೆಯಲ್ಲಿ 1951ರಿಂದ ಇಲ್ಲಿಯವರೆಗೆ ಕಾಂಗ್ರೆಸ್​ 11 ಬಾರಿ. ಬಿಜೆಪಿ, ಪ್ರಜಾ ಸೋಷಿಯಲಿಸ್ಟ್​ ಪಾರ್ಟಿ, ಸ್ವತಂತ್ರ ಪಕ್ಷ, ಜನತಾದಳ 1, ಜೆಡಿಯು 1 ಅಭ್ಯರ್ಥಿಗಳು ಒಂದು ಬಾರಿ ಗೆಲುವು ಸಾಧಿಸಿದ್ದಾರೆ.

1951 : ಎಸ್ ನಿಜಲಿಂಗಪ್ಪ , ಕಾಂಗ್ರೆಸ್ ,
1957 : ಮುಷೀರ್ ಉಲ್ ಮುಲ್ಕ್ ಇಮಾಂ ಸಾಬ್ , ಪ್ರಜಾ ಸೋಷಿಯಲಿಸ್ಟ್ ಪಾರ್ಟಿ
1962 : ಎಸ್ ವೀರಬಸಪ್ಪ , ಕಾಂಗ್ರೆಸ್
1967 : ಮುಷೀರ್ ಉಲ್ ಮುಲ್ಕ್ ಇಮಾಂ ಸಾಬ್ , ಸ್ವತಂತ್ರ ಪಾರ್ಟಿ
1972 : ಕೊಂಡಜ್ಜಿ ಬಸಪ್ಪ,
1977,1980 : ಕೆ ಮಲ್ಲಣ್ಣ , ಕಾಂಗ್ರೆಸ್
1984 : ಕೆ ಎಚ್ ರಂಗನಾಥ್ , ಕಾಂಗ್ರೆಸ್ )
1989,1991 : ಸಿಪಿ ಮೂಡಲಗಿರಿಯಪ್ಪ , ಕಾಂಗ್ರೆಸ್
1996 : ಪಿ ಕೋದಂಡರಾಮಯ್ಯ , ಜನತಾ ದಳ
1998 : ಸಿಪಿ ಮೂಡಲಗಿರಿಯಪ್ಪ , ಕಾಂಗ್ರೆಸ್
1999 : ಶಶಿಕುಮಾರ್ ,ಜೆಡಿಎಸ್
2004 : ಎನ್ ವೈ ಹನುಮಂತಪ್ಪ , ಕಾಂಗ್ರೆಸ್
2009 : ಜನಾರ್ದನ ಸ್ವಾಮಿ , ಬಿಜೆಪಿ
2014 : ಬಿ ಎನ್ ಚಂದ್ರಪ್ಪ , ಕಾಂಗ್ರೆಸ್

2014ರ ‘ಲೋಕ’ ಸಮರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್ ಚಂದ್ರಪ್ಪ ಅವರು ಬಿಜೆಪಿ ಅಭ್ಯರ್ಥಿ ಜನಾರ್ದನ ಸ್ವಾಮಿ ಅವರ ವಿರುದ್ಧ 1,01,291 ಮತಗಳ ಅಂತರದ ಗೆಲವು ಸಾಧಿಸಿದ್ದರು. ಬಿ.ಎನ್ ಚಂದ್ರಪ್ಪ ಅವರಿಗೆ 4,67,511 ಮತಗಳು ಬಂದಿದ್ದವು. ಜನಾರ್ದನ ಸ್ವಾಮಿ ಅವರು 3,66,220 ಮತಗಳನ್ನು ಪಡೆದಿದ್ದರು.

‘ಮತ’ ಗಣಿತ
ಪುರುಷರು 8,84,150
ಮಹಿಳೆಯರು 8,63,735
ಯುವ ಮತದಾರರು(ಮೊದಲ ಬಾರಿ) 30,978

ಒಟ್ಟು : 17,47,885

‘ಜಾತಿ’ ಗಣಿತ
ಪರಿಶಿಷ್ಟ ಜಾತಿ – 3,84,534
ಪರಿಶಿಷ್ಟ ಪಂಗಡ – 2,97,140
ಲಿಂಗಾಯತ – 1,72,516
ಕುರುಬ – 1,70,243
ಯಾದವ – 1,64,475
ಒಕ್ಕಲಿಗ-1,64, 400
ಮುಸ್ಲಿಂ- 1,92,791
ಇತರೆ -2,02,230

ಅಭ್ಯರ್ಥಿಗಳ ಬಲಾಬಲವೇನು?

ಬಿ.ಎನ್. ಚಂದ್ರಪ್ಪಗೆ ಪೂರಕ ಅಂಶಗಳೇನು?

*ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರೋದ್ರಿಂದ ಜೆಡಿಎಸ್ ಕಾರ್ಯಕರ್ತರ ಬೆಂಬಲದ ‘ಬಲ’
*ಹಾಲಿ ಸಂಸದರಾಗಿರುವುದರಿಂದ ಜನರಿಗೆ ಚಿರಪರಿಚಿತ ಮುಖ
*ಬಿಜೆಪಿಯ ಪ್ರತಿಸ್ಪರ್ಧಿ ಬೇರೆ ಕ್ಷೇತ್ರದವರಾಗಿರುವುದು ಚಂದ್ರಪ್ಪರಿಗೆ ಪ್ಲಸ್
*ಈಗಾಗಲೇ 8 ಕ್ಷೇತ್ರಗಳ ‘ಕೈ’ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದು
*ಮಾಜಿ ಶಾಸಕರು, ಮಾಜಿ ಮಂತ್ರಿಗಳು ಚಂದ್ರಪ್ಪ ಅವರ ಬೆಂಬಲಕ್ಕೆ ನಿಂತಿರುವುದು

ಬಿ.ಎನ್. ಚಂದ್ರಪ್ಪಗೆ ಇರುವ ಆತಂಕಗಳೇನು?

*ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕ ಇರುವುದು

*5 ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ

*ಹೀಗಾಗಿ ಮತದಾರರನ್ನು ಸೆಳೆಯಲು ಕಷ್ಟವಾಗಬಹುದು

*ಸ್ಥಳೀಯರಿಗೆ ಆದ್ಯತೆ ನೀಡಿಲ್ಲ ಅನ್ನೋ ಕಾರಣಕ್ಕೆ ಕೆಲ ‘ಕೈ’ ಮುಖಂಡರು ಭಿನ್ನರಾಗ ಎತ್ತಿರುವುದು

ಎ. ನಾರಾಯಣಸ್ವಾಮಿಗೆ ಇರುವ ಪೂರಕ ಅಂಶಗಳೇನು?

*ಪ್ರಧಾನಿ ನರೇಂದ್ರ ಮೋದಿ ಅಲೆಯಿರುವುದು

*ಜಿಲ್ಲೆಯ 5 ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ

*ಇದು ಗೆಲುವಿಗೆ ಸುಗಮದಾರಿ ಆಗಬಹುದೆಂಬ ವಿಶ್ವಾಸ

*ಸಂಸದ ಬಿ.ಎನ್​​. ಚಂದ್ರಪ್ಪನವರ ಕಾರ್ಯವೈಖರಿ ಬಗ್ಗೆ ಸ್ಥಳೀಯರಿಗೆ ಅಸಮಾಧಾನ

*ಎ. ನಾರಾಯಣಸ್ವಾಮಿಗೆ ಇರುವ ಆತಂಕಗಳೇನು?

*ಲೋಕಸಭೆ ವಿಷಯ ಬಂದಾಗ ಚಿತ್ರದುರ್ಗ ಕಾಂಗ್ರೆಸ್​​ನ ಭದ್ರಕೋಟೆ
*ನಾರಾಯಣಸ್ವಾಮಿ ಬಗ್ಗೆ ಸ್ಥಳೀಯರಿಗೆ ಅಷ್ಟಾಗಿ ತಿಳಿಯದೇ ಇರುವುದು

ಪ್ರಭಾವ ಬೀರುವ ಅಂಶಗಳು

*ಜಿಲ್ಲೆಯಲ್ಲಿ ಕುಡಿಯುವ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ

*ಫ್ಲೋರೈಡ್ ಯುಕ್ತ ನೀರು ಇರುವುದರಿಂದ ವಿವಿಧ ಕಾಯಿಲೆಗಳಿಗೆ ತುತ್ತಾದ ಜನರು

*ಜಿಲ್ಲೆಗೆ ವರದಾನವಾಗಬೇಕಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಸದ್ದೇ ಇಲ್ಲ

*ಹಲವು ದಶಕಗಳಿಂದ ಕಾಡುತ್ತಿರುವ ಬರದ ಛಾಯೆ

*ತುಮಕೂರು, ಚಿತ್ರದುರ್ಗ, ದಾವಣೆಗೆರೆ ನಡುವೆ ರೈಲು ಸೇವೆಯ ಭರವಸೆ ಭರವಸೆಯಾಗಿಯೇ ಇದೆ

*ಜಿಲ್ಲೆಯಲ್ಲಿ ಯಾವುದೇ ಜೀವನದಿ ಇಲ್ಲದಿರುವುದರಿಂದ ವ್ಯವಸಾಯಕ್ಕೆ ಮಳೆಯೇ ಆಸರೆ

*ಕೈಗಾರಿಕೆ ಇಲ್ಲದಿರುವುದರಿಂದ ದುಡಿಯುವ ಕೈಗಳಿಗೆ ಕೆಲಸ ಇಲ್ಲ

ಹಾಲಿ ಸಂಸದರು ಮಾಡಿದ್ದೇನು? (ಅನುದಾನ ಬಳಕೆ)

*ಕ್ಷೇತ್ರಕ್ಕೆ 25 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ

*ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರಿನ ಘಟಕಗಳ ಸ್ಥಾಪನೆ

*ಹೈಮಾಸ್ಟ್ ದೀಪಗಳು, ಬಸ್ ತಂಗುದಾಣಗಳು, ಸಮುದಾಯ ಭವನ ನಿರ್ಮಾಣ ಮಾಡಿದ್ದಾರೆ

*ಈ ಎಲ್ಲಾ ಅಭಿವೃದ್ಧ ಕಾರ್ಯಗಳಿಗೆ ಒಟ್ಟು 23 ಕೋಟಿ ರೂ. ವಿನಿಯೋಗಿಸಿದ್ದಾರೆ

*ಇನ್ನೂ 2 ಕೋಟಿ ರೂಪಾಯಿ ಸಂಸದರ ನಿಧಿಯಲ್ಲಿಯೇ ಉಳಿದುಕೊಂಡಿದೆ

ಕ್ಷೇತ್ರದ ವಿಶೇಷ

*ಐತಿಹಾಸಿಕ ಪ್ರಾಮುಖ್ಯತೆ ಪಡೆದಿರುವ 7 ಸುತ್ತಿನ ಕಲ್ಲಿನ ಕೋಟೆ

*ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ವಾಣಿ ವಿಲಾಸ ಸಾಗರ ಜಲಾಶಯವೂ ಒಂದು

*ಜೋಗಿಮಟ್ಟಿ, ಆಡುಮಲ್ಲೇಶ್ವರ, ಶ್ರೀ ಮುರುಘರಾಜೇಂದ್ರ ಮಠ ಬಹಳ ಪ್ರಸಿದ್ಧ

*ಜಟ್ಟೂರು ರಾಮೇಶ್ವರ, ನಾಯಕನ ಹಟ್ಟಿ ಗುರುತಿಪ್ಪೇರುದ್ರೇಸ್ವಾಮಿ ದೇವಸ್ಥಾನಗಳಿವೆ

*ಗವಿ ರಂಗಾಪುರ, ಹಾಲು ರಾಮೇಶ್ವರ ದೇವಸ್ಥಾನಗಳು ಕಾರಣಿಕ ಎನಿಸಿಕೊಂಡಿವೆ

RELATED ARTICLES

Related Articles

TRENDING ARTICLES