Monday, January 27, 2025

ಸುದೀಪ್​ ಚುನಾವಣಾ ಪ್ರಚಾರಕ್ಕೆ ಹೋಗ್ತಾರಾ? ಹೋಗಲ್ವಾ?

ಬೆಂಗಳೂರು : ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ. ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸುಮಲತಾ ಪರ ಪ್ರಚಾರಕ್ಕೆ ಹೋಗೋದಾಗಿ ತಿಳಿಸಿದ್ರು. ಬಳಿಕ ಹೇಳಿದಂತೆಯೇ ಈಗ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ದರ್ಶನ್, ಯಶ್ ಪ್ರಚಾರಕ್ಕೆ ಹೋಗೋ ವಿಷ್ಯ ತಿಳಿಯುತ್ತಿದ್ದಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ‘ನೀವು ಸಮಲತಾ ಅವರ ಪರ ಪ್ರಚಾರಕ್ಕೆ ಹೋಗ್ತೀರಾ’? ಅನ್ನೋ ಪ್ರಶ್ನೆ ಎದುರಾಯ್ತು. ಆಗ ಸುದೀಪ್, ದರ್ಶನ್ ಅವರಿರುವಾಗ ನಾನ್ಯಾಕೆ? ಅಂಬರೀಶ್ ಅವರ ಹೆಸರಿನ ಬಲವೇ ಸಾಕು ಎಂದು ತಾನು ಪ್ರಚಾರಕ್ಕೆ ಹೋಗಲ್ಲ’ ಅಂತ ಸ್ಪಷ್ಟಪಡಿಸಿದ್ದರು.
ಆದರೆ, ಸುದೀಪ್ ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತಾರೆ ಅನ್ನೋ ಸುದ್ದಿ ಇವತ್ತು ಕೂಡ ಹರಿದಾಡಿತ್ತು. ಇದು ಕೇವಲ ಅಂತೆ-ಕಂತೆ ಸುದ್ದಿಯಷ್ಟೇ. ಸುದೀಪ್ ಯಾವುದೇ ನಾಯಕರ ಪರ ಪ್ರಚಾರಕ್ಕೆ ಹೋಗದಿರಲು ಡಿಸೈಡ್ ಮಾಡಿದ್ದಾರೆ. ಈ ಬಗ್ಗೆ ಪವರ್ ಟಿವಿಗೆ ಸುದೀಪ್ ಅವರ ಮ್ಯಾನೇಜರ್ ಮಂಜುನಾಥ್ ಗೌಡ ಸ್ಪಷ್ಟನೆ ನೀಡಿದ್ದಾರೆ. ‘ಸುದೀಪ್ ಅವರು ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ. ಹಿಂದೆಯೇ ಈ ಬಗ್ಗೆ ಖಚಿತಪಡಿಸಿದ್ರು. ಅವರು ಅಭಿಮಾನಿಗಳಿಗೆ ಹಿಂದೆ ಹೇಳಿದಂತೆಯೇ ನಡೆದುಕೊಳ್ಳುತ್ತಾರೆ’ ಅಂತ ಮಂಜುನಾಥ ಗೌಡ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES