Wednesday, October 30, 2024

‘ನನ್ನ ಮಗನಿಗೆ ಯುವರಾಜ ಅನ್ನೋ ಬಿರುದು ಇದೆ’ : ದರ್ಶನ್ ಹೇಳಿಕೆಗೆ ಸಿಎಂ ತಿರುಗೇಟು

ಬೆಂಗಳೂರು: ‘ಡಿಬಾಸ್’​ ಅನ್ನೋ ಬಿರುದು ನಾಲ್ಕೈದು ಜನ ಮಾತ್ರ ಕೊಟ್ಟಿರೋದು. ಆರೂವರೆ ಕೋಟಿ ಜನರು ಬಿರುದು ಕೊಟ್ಟಿದ್ದಾರಾ ಅಂತ ಸಿಎಂ ಹೆಚ್​​. ಡಿ. ಕುಮಾರಸ್ವಾಮಿ ಅವರು ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಿಎಂ ಅವರು ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ನನ್ನ ಮಗನಿಗೂ ಕೂಡ ಯುವರಾಜ ಅಂತ ಬಿರುದು ಕೊಟ್ಟಿದ್ದಾರೆ. ನಿಖಿಲ್​ ಈಗ ಯುವರಾಜನಾ..? ಅಂತ ಪ್ರಶ್ನಿಸಿದ್ದಾರೆ.

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ ದರ್ಶನ್ ಅವರು “ಚುನಾವಣೆ ಸಂದರ್ಭ ಇವೆಲ್ಲ ಸಾಮಾನ್ಯ. ಡಿ ಬಾಸ್ ಅನ್ನೋದು ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಬಿರುದು. ಆಪಾದನೆಗಳ ಬಗ್ಗೆ ಪೋಸ್ಟ್, ವಿಡಿಯೋಗಳನ್ನು ಮಾಡಬೇಡಿ. ಶಾಂತಿ ಕಾಪಾಡಿ” ಅಂತ ಅಭಿಮಾನಿಗಳಿಗೆ ಕರೆ ನೀಡಿದ್ರು.

RELATED ARTICLES

Related Articles

TRENDING ARTICLES