Wednesday, May 22, 2024

‘ದಳಪತಿ’ಗಳಿಗೆ ಶುರುವಾಯ್ತಾ ಸುಮಲತಾ ಭಯ? ಸಿನಿಮೀಯ ರೀತಿಯಲ್ಲಿ ಸುಮಲತಾ ಹೆಸರಿನ ಮೂವರು ಕಣಕ್ಕೆ..!

ಮಂಡ್ಯ : ಸುಮಲತಾ ಸುನಾಮಿ ‘ದಳ’ಪತಿಗಳ ನಿದ್ದೆಗೆಡಿಸಿದೆಯಾ..? ಕಾಂಗ್ರೆಸ್​-ಜೆಡಿಎಸ್​ ಮೈತ್ರಿಗೆ ಸುಮಲತಾ ಅಂದ್ರೆ ಭಯ ಶುರುವಾಯ್ತಾ..?
ಹೌದು, ಇಂಥಾ ಪ್ರಶ್ನೆಗಳು ಮೂಡಲು ಕಾರಣ ಸುಮಲತಾ ಅನ್ನೋ ಹೆಸರಿನ ಮೂವರು ಚುನಾವಣಾ ಅಖಾಡಕ್ಕೆ ಧುಮುಕಿರುವುದು..!
ನೀವು ನೀನಾಸಂ ಸತೀಶ್ ಅವರ ಅಭಿನಯದ ‘ಅಯೋಗ್ಯ’ಸಿನಿಮಾ ನೋಡಿರಬಹುದು? ಆ ಸಿನಿಮಾದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬೋರೇಗೌಡ ಹೆಸರಿನ ಹಲವರು ಸ್ಪರ್ಧಿಸಿದಂತೆ ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ನಾಮಪತ್ರ ಸಲ್ಲಿಸಿದ್ದಾರೆ..! ಸುಮಲತಾ ಅಂಬರೀಶ್ ಅವರನ್ನೂ ಒಳಗೊಂಡಂತೆ ಮಂಡ್ಯ ರಣಕಣದಲ್ಲೀಗ ನಾಲ್ವರು ಸುಮಲತಾ ಹೆಸರಿನ ಸ್ಪರ್ಧಿಗಳಿದ್ದಾರೆ.
ಕೆ.ಆರ್ ಪೇಟೆಯ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ, ಕನಕಪುರದ ರಂಗನಾಥ ಬಡಾವಣೆಯ ಸುಮಲತಾ ದರ್ಶನ್, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ ಹೊಸರಿನ ಸುಮಲತಾ ಸಿದ್ದೇಗೌಡ ಎಂಬ ಮೂವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಈ ಮೂವರು ಜೆಡಿಎಸ್ ಮುಖಂಡರ ಜೊತೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಜೆಡಿಎಸ್ ಸುಮಲತಾ ಅಂಬರೀಶ್ ಅವರಿನ ಭಯದಿಂದ ಮತದಾರರ ದಿಕ್ಕು ತಪ್ಪಿಸಲು ಸುಮಲತಾ ಅನ್ನೋ ಹೆಸರಿನ ಮಹಿಳೆಯರಿಂದ ನಾಮಪತ್ರ ಸಲ್ಲಿಕೆ ಮಾಡಿಸಿದ್ರಾ ಅನ್ನೋದು ಸಹಜವಾಗಿ ಮೂಡುವ ಪ್ರಶ್ನೆಯಾಗಿದೆ.

RELATED ARTICLES

Related Articles

TRENDING ARTICLES