Wednesday, January 22, 2025

ಮಂಡ್ಯದಲ್ಲಿ ಜೆಡಿಎಸ್​ಗೆ ಮತ್ತೊಂದು ಬಿಗ್ ಶಾಕ್​..!

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ಜೆಡಿಎಸ್​ಗೆ ಮತ್ತೊಂದು ಬಿಗ್ ಶಾಕ್​ ಎದುರಾಗಿದೆ. ರೈತಸಂಘ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ. ಇಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡೋ ಸಾಧ್ಯತೆ ಇದೆ.
ರೈತಸಂಘ ಸುಮಾರು 1.50 ಲಕ್ಷ ಮತ ಬ್ಯಾಂಕ್​ ಅನ್ನು ಹೊಂದಿದ್ದು, ಸುಮಲತಾ ಅವರಿಗೆ ಬೆಂಬಲ ನೀಡಲು ರೈತಸಂಘದ ಕಾರ್ಯಕರ್ತರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸುಮಲತಾ ಅವರು ಇತ್ತೀಚೆಗೆ ರೈತನಾಯಕ ದಿ. ಕೆ.ಎಸ್​ ಪುಟ್ಟಣ್ಣಯ್ಯ ಅವರ ಮನೆಗೆ ಭೇಟಿ ನೀಡಿದ್ದರು.
ರೈತಸಂಘದ ಬೆಂಬಲದಿಂದ ಸುಮಲತಾ ಅವರಿಗೆ ಮತ್ತೊಂದು ದೊಡ್ಡ ಶಕ್ತಿಯ ಸಾಥ್ ಸಿಕ್ಕಂತಾಗಿದೆ. ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಭಾರೀ ಬೆಂಬಲ ಸಿಗುತ್ತಿದೆ. ನಟರಾದ ದರ್ಶನ್ ಹಾಗೂ ಯಶ್ ಸುಮಲತಾ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಸ್ಥಳೀಯ ಕಾಂಗ್ರೆಸ್​ ಮುಖಂಡರೂ ಕೂಡ ಸುಮಲತಾ ಅವರಿಗೆ ಸಪೋರ್ಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES