Monday, December 9, 2024

ನಿಖಿಲ್​ ಕುಮಾರಸ್ವಾಮಿ ಬರೋಬ್ಬರಿ 56.47 ಕೋಟಿ ರೂ ಮೌಲ್ಯದ ಆಸ್ತಿ ಒಡೆಯ..!

ಮಂಡ್ಯ : ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ನಾಮಪತ್ರದೊಂದಿಗೆ ಚುನಾವಣಾ ಅಫಿಡವಿಟ್​ನಲ್ಲಿ ನಿಖಿಲ್ ಅವರು ತಮ್ಮ ಆಸ್ತಿ ವಿವರಗಳನ್ನು ನಮೂದಿಸಿದ್ದಾರೆ. ನಿಖಿಲ್​ ಘೋಷಣೆ ಮಾಡಿರುವಂತೆ ಅವರು ಬರೋಬ್ಬರಿ 56.47 ಕೋಟಿ ರೂ ಮೌಲ್ಯದ ಆಸ್ತಿಯ ಒಡೆಯ.
ತಮ್ಮ ಬಳಿ 17.53 ಕೋಟಿ ರೂ ಮೌಲ್ಯದ ಚರಾಸ್ತಿ ಮತ್ತು 22.53 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಅವರು ತಿಳಿಸಿದ್ದಾರೆ. ವಾರ್ಷಿಕ 71.47 ಲಕ್ಷ ರೂ ಆದಾಯವಿದೆ. 200 ಗ್ರಾಂ ಚಿನ್ನವಿದೆ. 3,11,49,255 ರೂ. ಮೌಲ್ಯದ ರೇಂಜ್​ ರೋವರ್​ ಕಾರು, 23,03,250 ರೂ. ಮೌಲ್ಯದ ಮಿನಿಟಿ ವ್ಯಾನ್​ ಇರೋದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ . 10,77,773 ರೂ. ಹೂಡಿಕೆ ಮಾಡಿರೋದಾಗಿ ನಮೂದಿಸಿದ್ದಾರೆ. ಜೊತೆಗೆ 2.40 ಕೋಟಿ ರೂ ಸಾಲ ಮಾಡಿಕೊಂಡಿರೋದಾಗಿಯೂ ಘೋಷಿಸಿದ್ದಾರೆ.

RELATED ARTICLES

Related Articles

TRENDING ARTICLES