ಮಂಡ್ಯ : ನನ್ನನ್ನು ಮನೆ ಮಗನಾಗಿ ಸ್ವೀಕರಿಸಿ ಅಂತ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ರು.
ನಾಮಪತ್ರ ಸಲ್ಲಿಸಿ ಬಳಿಕ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇವೇಗೌಡರ ಕುಟುಂಬದ ಸದಸ್ಯ ನಾನು. ನಾನು ಯಾವತ್ತೂ ರೈತಾಪಿ ವರ್ಗಕ್ಕೆ ಶ್ರಮಿಸುತ್ತೇನೆ. ಕೊನೆಯುಸಿರು ಇರುವವರೆಗೂ ರೈತರಿಗಾಗಿ ಶ್ರಮಿಸುತ್ತೇನೆ ಎಂದರು. ನನ್ನನ್ನು ನಿಮ್ಮ ಮನೆ ಮಗನಾಗಿ ಸ್ವೀಕರಿಸಿ, ನನ್ನ ಮೇಲೆ ನೀವು ನಂಬಿಕೆ ಇಡಿ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದ್ರು.