Thursday, December 26, 2024

ಸುಮಲತಾ ಕರೆದ್ರೂ ಪ್ರಚಾರಕ್ಕೆ ಹೋಗಲ್ಲ ಅಂದ್ರು ಶಿವಣ್ಣ..!

ಮೈಸೂರು : ಮಂಡ್ಯ ಲೋಕಸಭಾ ರಣಕಣ ಸ್ಟಾರ್​​ವಾರ್​ಗೆ ವೇದಿಕೆ ಆಗಿರೋದು ಗೊತ್ತೇ ಇದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್​ ಸ್ಟಾರ್​ ಯಶ್​ ನಿಂತಿದ್ದಾರೆ. ಹೀಗಾಗಿ ಮತ್ಯಾವೆಲ್ಲಾ ನಟರು ಸುಮಲತಾ ಪರ ಪ್ರಚಾರಕ್ಕೆ ಬರ್ತಾರೆ ಅನ್ನೋ ಕುತೂಹಲ ಎಲ್ಲರದ್ದು. ಹಾಗೆಯೇ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕೂಡ ಸಿನಿಮಾ ರಂಗದಲ್ಲಿ ಇರುವುದರಿಂದ ಅವರ ಪರ ಯಾವ ಸ್ಟಾರ್ ನಟರು ಬರುವರು ಅನ್ನೋದು ಸಹ ಕುತೂಹಲ.
ಈ ಪ್ರಶ್ನೆ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರಿಗೂ ಎದುರಾಯ್ತು. ಸುಮಲತಾ ಪರ ಪ್ರಚಾರಕ್ಕೆ ಹೋಗ್ತೀರಾ ಅನ್ನೋ ಪ್ರಶ್ನೆಗೆ ಶಿವಣ್ಣ ಅವರದ್ದು ನೇರ ಉತ್ತರ, ‘ಇಲ್ಲ ನಾನು ಪ್ರಚಾರ ಮಾಡಲ್ಲ’..!
ಹೌದು ಶಿವಣ್ಣ ಸುಮಲತಾ ಪರ ಪ್ರಚಾರ ಮಾಡುವುದಿಲ್ಲ ಅಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ‘ಸುಮಲತಾ ನನ್ನ ಬಳಿ ಬೆಂಬಲಿಸಿ ಎಂದು ಕೇಳಿದರು ಹೋಗಲ್ಲ. ರಾಜಕೀಯಕ್ಕೆ ಹೋಗಲು ತುಂಬಾ ಬುದ್ಧಿ ಬೇಕು. ನಾನು ಅಷ್ಟು ಬುದ್ಧಿವಂತ ಅಲ್ಲ. ಶಿವಮೊಗ್ಗಕ್ಕೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ’ ಅಂತ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಶಿವಣ್ಣ ಅವರ ಸಂಬಂಧಿ ಮಧುಬಂಗಾರಪ್ಪ ಅವರು ರಣಕಣದಲ್ಲಿದ್ದಾರೆ.

RELATED ARTICLES

Related Articles

TRENDING ARTICLES