Wednesday, October 30, 2024

ರಸೆಲ್, ಗಿಲ್​ ಕಮಾಲ್ ; ಕೋಲ್ಕತ್ತಾಗೆ ರೋಚಕ ಗೆಲುವು ..!

ಕೋಲ್ಕತ್ತಾ : ಐಪಿಎಲ್ 12ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಕೋಲ್ಕತ್ತಾ ನೈಟ್​ರೈಡರ್ಸ್​ ರೋಚಕ ಗೆಲುವನ್ನು ದಾಖಲಿಸಿದೆ.
ಈಡನ್​ ಗಾರ್ಡನ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್ ಗೆದ್ದ ಕೋಲ್ಕತ್ತ ಹೈದರಾಬಾದ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್​ಗೆ ಡೇವಿಡ್​ ವಾರ್ನರ್ (85) ಮತ್ತು ಜಾನಿ ಬೇರ್‌ಸ್ಟೋವ್‌ (39) ಉತ್ತಮ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ 118 ರನ್​ಗಳ ಜೊತೆಯಾಟವಾಡಿತು. ಬಳಿಕ ವಿಜಯ್ ಶಂಕರ್ 40 ರನ್ ಕೊಡುಗೆ ನೀಡಿದ್ರು. ಅಂತಿಮವಾಗಿ ನಿಗಧಿತ 20 ಓವರ್​ಗಳಲ್ಲಿ ಹೈದರಾಬಾದ್​ 3 ವಿಕೆಟ್ ನಷ್ಟಕ್ಕೆ 181ರನ್​ಗಳ ಸವಾಲಿನ ಗುರಿ ನೀಡಿತು.
ಗುರಿ ಬೆನ್ನತ್ತಿದ ಕೋಲ್ಕತ್ತಾ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ ಕೇವಲ 7 ರನ್​ ಇದ್ದಾಗ ಓಪನರ್ ಕ್ರಿಸ್​ ಲಿನ್ (7) ಪೆವಿಲಿಯನ್​ ಸೇರಿದ್ರು. ಆದರೆ ಒನ್​ಡೌನ್ ಬಂದ ಕನ್ನಡಿಗ ರಾಬಿನ್ ಉತ್ತಪ್ಪ (35) ಮತ್ತೋರ್ವ ಓಪನರ್ ನಿತೀಶ್ ರಾಣಾ (68) ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ಈ ಜೋಡಿ 80ರನ್ ಕೊಡುಗೆ ನೀಡಿತಾದ್ರೂ ಒಂದು ಹಂತದಲ್ಲಿ ವಿಜಯಲಕ್ಷ್ಮೀ ಹೈದರಬಾದ್​ ಕಡೆಗೆ ವಾಲಿದ್ದಳು. ಆದರೆ ಆ್ಯಂಡ್ರೆ ರಸೆಲ್ ಮತ್ತು ಶುಭ್​ಮನ್​ ಗಿಲ್ ಬಿರುಸಿನ ಆಟವಾಡಿ ತಂಡಕ್ಕೆ ವಿರೋಚಿತ ಗೆಲುವು ತಂದುಕೊಟ್ರು. ರಸೆಲ್ ಔಟಾಗದೆ 49 ಹಾಗೂ ಗಿಲ್ ಅಜೇಯ 18ರನ್​ ಬಾರಿಸಿದ್ರು.

RELATED ARTICLES

Related Articles

TRENDING ARTICLES