ಹಾಸನ : ಕಾಂಗ್ರೆಸ್ ಗೆಲ್ಲಿಸ್ತೀನಿ ಅಂತ ಬಿಜೆಪಿ ಅಭ್ಯರ್ಥಿಯೊಬ್ಬರು ಶಪಥ ಮಾಡಿ ಯಡವಟ್ಟು ಮಾಡಿಕೊಂಡಿದ್ದಾರೆ…! ಈ ಯಡವಟ್ಟು ಮಾಡಿದವರು ಬೇರ್ಯಾರು ಅಲ್ಲ, ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡು ಟಿಕೆಟ್ ಗಿಟ್ಟಿಸಿಕೊಂಡಿರುವ ಮಾಜಿ ಸಚಿವ ಎ. ಮಂಜು..!
ಬೇಲೂರು ಬಿಜೆಪಿ ಕಾರ್ಯರ್ತರ ಸಭೆಯಲ್ಲಿ ಮಾತನಾಡುತ್ತಾ ಎ.ಮಂಜು ಕಾಂಗ್ರೆಸ್ ಗೆಲ್ಲಿಸೋದಾಗಿ ಶಪಥ ಮಾಡಿದ್ದಾರೆ. 2022ರ ಚುನಾವಣೆಯಲ್ಲಿ ಕ್ಷೇತ್ರದ 8 ಕಡೆಯೂ ಕಾಂಗ್ರೆಸ್ ಗೆಲ್ಲಿಸುತ್ತೇನೆ. ಹಾಸದಲ್ಲಿ ಬಿಜೆಪಿ ಗೆಲ್ಲಿಸೋ ಹೊಣೆ ನನ್ನದು ಎಂದು ಹೇಳಿದ್ದಾರೆ. ಬಿಜೆಪಿ ಗೆಲ್ಲಿಸುತ್ತೇನೆ ಎನ್ನುವ ಭರದಲ್ಲಿ ಎ. ಮಂಜು ಕಾಂಗ್ರೆಸ್ ಗೆಲ್ಲಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಗೆಲ್ಲಿಸ್ತೀನಿ ಅಂತ ಶಪಥ ಮಾಡಿದ ಬಿಜೆಪಿ ಅಭ್ಯರ್ಥಿ..!
TRENDING ARTICLES