ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ ‘ಲೋಕ’ಕಣಕ್ಕಿಳಿಯುತ್ತಿದ್ದಾರೆ. ಬೆಂಗಳೂರು ದಕ್ಷಿಣದಿಂದ ಮೋದಿ ಸ್ಪರ್ಧಿಸುತ್ತಿರುವ ಸೂಪರ್ ಎಕ್ಸ್ಕ್ಲೂಸಿವ್ ನ್ಯೂಸ್ ಅನ್ನು ನಿಮ್ಮ ಪವರ್ ಟಿವಿ ಬ್ರೇಕ್ ಮಾಡಿದೆ.
ಅಂದಹಾಗೆ ಕರ್ನಾಟಕದಿಂದ ಸ್ಪರ್ಧಿಸುತ್ತಿರುವವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲಿಗರಲ್ಲ. ಈ ಹಿಂದೆಯೂ ಹೊರಗಿನ ನಾಯಕರು ಕರ್ನಾಟಕದಿಂದ ಸ್ಪರ್ಧಿಸಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅಂದು ಡಿ.ಬಿ ಚಂದ್ರೇಗೌಡರು ಇಂದಿರಾ ಗಾಂಧಿ ಅವರಿಗೆ ಸೀಟು ಬಿಟ್ಟುಕೊಟ್ಟು ಚಿಕ್ಕಮಗಳೂರಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು.
ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರು 1999ರಲ್ಲಿ ನಮ್ಮ ಕರ್ನಾಟಕದ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿ ಎರಡೂ ಕಡೆ ಗೆಲುವು ಸಾಧಿಸಿದ್ರು. ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್ ಅವರು ಕಣದಲ್ಲಿದ್ದರು. ಸೋನಿಯಾ ಅವರ ಎದುರು ಸುಷ್ಮಾ ಸ್ವರಾಜ್ ಪರಾಭವಗೊಂಡಿದ್ದರು.
ಇಂದಿರಾ ಗಾಂಧಿ ಅವರ ಆಪ್ತ ಸಿ.ಎಂ ಸ್ಟಿಫನ್ ಅವರು 1980ರಲ್ಲಿ ಕಲಬುರಗಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 1980ರಲ್ಲಿ ಕಲಬುರಗಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಧರಂಸಿಂಗ್ ಅವರು ಚುನಾವಣೆಯಲ್ಲಿ ಗೆದ್ದು ಕೇವಲ ಒಂದೇ ಒಂದು ತಿಂಗಳಿಗೆ ರಾಜೀನಾಮೆ ನೀಡಿ ಸ್ಟಿಫನ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು.