Wednesday, January 22, 2025

ಸುಮಲತಾ ರೋಡ್​ಶೋಗೆ ‘ಗಜ’ಕೇಸರಿ ಬಲ..!

ಮಂಡ್ಯ : ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸುಮಲತಾ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಸಿಲ್ವರ್​​ ಜ್ಯುಬಿಲಿ ಪಾರ್ಕ್​ವರೆಗೆ ಮೆರವಣಿಗೆ ಕೈಗೊಂಡಿದ್ದಾರೆ.
ಸುಮಲತಾ ಅವರ ಬೃಹತ್​ ರೋಡ್​ಶೋಗೆ ‘ಗಜ’ಕೇಸರಿ ಬಲ ಸಿಕ್ಕಿದೆ. ಸುಮಲತಾ ಅವರು ಮಂಡ್ಯದಲ್ಲಿ ಸ್ಪರ್ಧಿಸ್ತೀನಿ ಅಂತ ಹೇಳಿದಾಗಲೇ ಬೆಂಬಲ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್​ ಸ್ಟಾರ್ ಯಶ್ ಸುಮಲತಾ ಅವರು ನಡೆಸಿದ ಪ್ರೆಸ್​ಮೀಟ್​ನಲ್ಲೂ ಜೊತೆಗಿದ್ದರು. ಇಂದು ಸುಮಲತಾ ಅವರು ನಾಮಪತ್ರ ಸಲ್ಲಿಸಿ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಇಲ್ಲಿಯೂ ದರ್ಶನ್ ಮತ್ತು ಯಶ್​ ಮೆರಣಿಗೆ ಹಾಗೂ ಸಮಾವೇಶದ ಸಾರಥ್ಯವಹಿಸಿಕೊಂಡಿದ್ದಾರೆ. ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್​ ಅಂಬರೀಶ್ ಕೂಡ ಉಪಸ್ಥಿತರಿದ್ದಾರೆ.
ಸಿಲ್ವರ್ ಜ್ಯುಬಿಲಿ ಪಾರ್ಕ್​ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಂಡ್ಯದಾದ್ಯಂತ ಸುಮಲತಾ ಅವರಿಗೆ ಭಾರಿ ಬೆಂಬಲ ಸಿಕ್ಕಿದೆ. ಕಾಂಗ್ರೆಸ್​ನ ಕೆಲವು ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರು ಸುಮಲತಾ ಬೆಂಬಲ ನೀಡಿ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ರ್ಯಾಲಿಯಲ್ಲಿ ಅಲ್ಲಲ್ಲಿ ಕಾಂಗ್ರೆಸ್​ ಫ್ಲಾಗ್​ಗಳೂ ಕಂಡುಬರುತ್ತಿವೆ.
ಅಭಿಮಾನಿಗಳು ದರ್ಶನ್​ ಅವರ ‘ಯಜಮಾನ’ ಚಿತ್ರದ ಬಸಣ್ಣಿ ಹಾಡಿಗೆ ಸಖತ್ ಸ್ಟೆಪ್ ಹಾಕುತ್ತಾ ಮೆರವಣಿಗೆ ಸಾಗಿದ್ದಾರೆ.

RELATED ARTICLES

Related Articles

TRENDING ARTICLES