Monday, December 23, 2024

‘ನಮ್ಮ ರಕ್ತದಲ್ಲಿ ನಿಮ್ಮ ಕಾಲು ತೊಳೆದ್ರೂ ಕಮ್ಮಿನೇ’ ಅಂದ ‘ಯಜಮಾನ’..!

ಮಂಡ್ಯ : ‘ನಮ್ಮ ಮೈಯಲ್ಲಿರೋ ರಕ್ತ ತೆಗೆದು ನಿಮ್ಮ ಕಾಲು ತೊಳೆದ್ರೂ ಕಮ್ಮಿನೇ’ ಅಂತ ಚಾಲೆಂಜಿಂಗ್ ಸ್ಟಾರ್ ಮಂಡ್ಯದ ಅಭಿಮಾನಿಗಳಿಗೆ ಹೇಳಿದ್ರು..!
ಮಂಡ್ಯ’ಲೋಕ’ಕಣದ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನೆರೆದಿದ್ದ ಅಭಿಮಾನಿಗಳುನ್ನು ಕುರಿತು , ‘ಮೈಯಲ್ಲಿರುವ ರಕ್ತವನ್ನು ತೆಗೆದು ನಿಮ್ಮ ಕಾಲು ತೊಳೆದ್ರೂ ಕಮ್ಮಿನೇ. ಯಾಕಂದ್ರೆ, ಈ ಉರಿ ಬಿಸಿಲಿನಲ್ಲಿ ನಮ್ಮ ಜೊತೆ ನಡೆದುಕೊಂಡು ಬಂದಿದ್ದೀರಾ. ನಾವು ನಿಮಗೆ ತಲಾ ಇಂತಿಷ್ಟು ಅಂತ ಏನೂ ಕೊಟ್ಟಿಲ್ಲ. ಅಪ್ಪಾಜಿ ಮೇಲಿನ ಪ್ರೀತಿಯಿಂದ ಬಂದಿದ್ದೀರಿ’ ಎಂದರು.
ಕಳೆದ ಎರಡು ದಿನಗಳಿಂದ ತಮ್ಮ ವಿರುದ್ಧ ಕೇಳಿ ಬರ್ತಿರೋ ಮಾತುಗಳಿಗೆ, ‘ನಮ್ಮ ಬಗ್ಗೆ ಯಾರು ಏನೇ ಮಾತಾಡಲಿ ನಾವು ಬೇಜಾರು ಮಾಡಿಕೊಳ್ಳಲ್ಲ. ಕೋಪ ಮಾಡಿಕೊಳ್ಳಲ್ಲ. ಬಹಳ ಹೆಮ್ಮೆಯಿಂದಲೇ ತೆಗೆದುಕೊಳ್ಳುತ್ತೇವೆ. ನಾನು ಮಾಡಿದ್ದಕ್ಕೆ ತಾನೇ? ಮಾಡಿದ್ದಾಯ್ತು, ಅನುಭವಿಸಿದ್ದೂ ಆಯ್ತು. ತಪ್ಪು ಮಾಡ್ದೇ ಇರೋದಕ್ಕೆ ನಾನು ದೇವರಲ್ಲ. ಅಷ್ಟೊಂದು ಒಳ್ಳೆಯವನು ಆದ್ರೆ ದೇವರಾಗಿರ್ತಿದ್ದೆ. ಇವತ್ತು ಇಲ್ಲಿದ್ದೀನಿ ಅಂತ ಆ ಮಾತೆಲ್ಲಾ ತೆಗೀತಾರೆ ಅಂದ್ರೆ ಖುಷಿ ಆಗುತ್ತೆ, ತುಂಬಾ ಪ್ರೀತಿ ಬರುತ್ತೆ. ನಾವು ಕೋಪ ಮಾಡಿಕೊಳ್ಳಲ್ಲ. ನೊಂದುಕೊಳ್ಳಲ್ಲ’ ಎಂದು ಖಡಕ್ ಉತ್ತರ ನೀಡಿದ್ರು.
ಇವತ್ತು ಬೇರೆ ಅವರು ಆಡ್ತಿರೋ ಮಾತಿಗೆ ಮತದಾನದ ಮೂಲಕ ಉತ್ತರ ಕೊಡಬೇಕು ಎಂದು ಕರೆಕೊಟ್ಟ ದರ್ಶನ್. ‘ಅಭಿಮಾನಿಗಳು ಒಂದ್ಸಲ ಪಂಚೆ ಎತ್ತಿ ಕಟ್ಟಿದ್ರೆ ಏನೇನೆಲ್ಲಾ ಆಗ್ಬಹುದು ಅಂತ ಒಂದ್ಸಲ ಉತ್ತರ ಕೊಡೋಣ. ಆಗ ಗೊತ್ತಾಗುತ್ತೆ. ಅಮ್ಮ ಇವತ್ತು ನೀವಿಟ್ಟ ಪ್ರೀತಿ, ಬೆಂಬಲದಿಂದ ಇಲ್ಲಿಗೆ ಬಂದಿದ್ದಾರೆ. ನೀವು ಅವರನ್ನು ಆಶೀರ್ವದಿಸಿ’ ಎಂದರು.

RELATED ARTICLES

Related Articles

TRENDING ARTICLES