ಬೆಂಗಳೂರು : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದ್ರು. ಕಲಬುರಗಿಯಲ್ಲಿ ಲೋಕ ಸಮರದ ರಣಕಹಳೆ ಮೊಳಗಿಸಿ, ಬಳಿಲ ಬೆಂಗಳೂರಲ್ಲಿ ಸಂವಾದ ನಡೆಸಿ ವಾಪಸ್ಸು ದೆಹಲಿಗೆ ತೆರಳಿದ್ರು.
ದೆಹಲಿಗೆ ತೆರಳೋ ಮುನ್ನ ರಾಹುಲ್ ಗಾಂಧಿ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಇದ್ದರು. ಈ ವೇಳೆ ತಾನು ದೆಹಲಿ ಕಡೆ ಪಯಣ ಬೆಳೆಸುವುದಕ್ಕಿಂತ ಮುಂಚೆ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರ ಕೈ ಹಿಡಿದು ಪಕ್ಕಕ್ಕೆ ಕರೆದೊಯ್ದು ಮಾತುಕತೆ ನಡೆಸಿದ್ರು. ಪರಮೇಶ್ವರ್ ಅವರಿಂದ ದೂರ ಹೋಗಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ 5 ನಿಮಿಷಗಳ ಕಾಲ ಮಾತುಕತೆ ನಡೆಸಿದ್ರು. ಈ ಮಾತುಕತೆ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.