Monday, December 23, 2024

ಅಪಹಾಸ್ಯಕ್ಕೀಡಾದ್ರು ಚೌಕಿದಾರ್ ಬಿಎಸ್​ವೈ..!

ದೇಶದಲ್ಲಿ ಮೈ ಭೀ ಚೌಕಿದಾರ್ ಅಭಿಯಾನ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರು, ಬೆಂಬಲಿಗರು ಟ್ಟಿಟರ್​ನಲ್ಲಿ ತಮ್ಮ ಹೆಸರಿನ ಹಿಂದೆ ‘ಚೌಕಿದಾರ್’ ಅಂತ ಸೇರಿಸಿಕೊಂಡಿದ್ದಾರೆ.
ಅಂತೆಯೇ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರು ಕೂಡ ಟ್ವಿಟರ್​ನಲ್ಲಿ ತಮ್ಮ ಹೆಸರನ್ನು ‘ಚೌಕಿದಾರ್​ ಬಿ.ಎಸ್​ ಯಡಿಯೂರಪ್ಪ’ ಅಂತ ಬದಲಾಯಿಸಿಕೊಂಡಿದ್ದಾರೆ. ಅವರು ಹೆಸರು ಬದಲಾಯಿಸಿಕೊಂಡಿದ್ದಷ್ಟೇ ಅಲ್ಲದೇ ಅಭಿಯಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಅಪಹಾಸ್ಯಕ್ಕೀಡಾಗಿದ್ದಾರೆ.
‘ಭಾರತವನ್ನು ಪ್ರೀತಿಸುವ ಒಬ್ಬ ನಾಗರಿಕನಾಗಿ #MainBhiChowkidar ಅಭಿಯಾನದ ಭಾಗವಾಗಲು ನಾನು ಹೆಮ್ಮೆ ಪಡ್ತೀನಿ. ಭಷ್ಟಾಚಾರ, ಕಿತ್ತು ತಿನ್ನೋ ಬಡತನ, ಭಯೋತ್ಪಾದನೆಯನ್ನು ಸೋಲಿಸಲು ನನ್ನ ಕೈಲಾದ ಪ್ರಯತ್ನವನ್ನು ಮಾಡ್ತೀನಿ ಮತ್ತು ಸಶಕ್ತ, ಸದೃಢ, ಶ್ರೀಮಂತವಾದ ಹೊಸ ಭಾರತವನ್ನು ಕಟ್ಟಲು ಸಹಾಯ ಮಾಡುತ್ತೇನೆ’ ಎಂದು ಬಿಎಸ್​ವೈ ಟ್ವೀಟ್ ಮಾಡಿದ್ದಾರೆ, ಈ ಟ್ವೀಟ್​ಗೆ ನೆಟ್ಟಿಗರು ವ್ಯಂಗ್ಯವಾಡಿ ರೀ ಟ್ವೀಟ್ ಮಾಡ್ತಿದ್ದಾರೆ.

RELATED ARTICLES

Related Articles

TRENDING ARTICLES