Monday, December 23, 2024

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

ಮಂಡ್ಯ : ಲೋಕಸಭಾ ಚುನಾವಣಾ ಕಣ ರಂಗೇರಿದೆ. ಮಂಡ್ಯ ರಣಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸುಮಲತಾ ಅಂಬರೀಶ್ ರೆಡಿಯಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ಬಗ್ಗೆ ಪ್ರೆಸ್​ಮೀಟ್​ ಮೂಲಕ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಈ ನಡುವೆ ಸುಮಲತಾ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿರೋ ಬಗ್ಗೆ ಎಕ್ಸ್​ಕ್ಲೂಸಿವ್ ಮಾಹಿತಿ ಪವರ್ ಟಿವಿಗೆ ಲಭ್ಯವಾಗಿದೆ. ಮಾರ್ಚ್​ 20ರಂದು ಸುಮಲತಾ ಅವರು ಬಲ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ. ಅಂದು ಬೆಳಗ್ಗೆ ನಾಮಪತ್ರ ಸಲ್ಲಿಸಿ, ಬಳಿಕ ಸಿಲ್ವರ್​ ಜುಬಿಲಿ ಪಾರ್ಕ್​ನಲ್ಲಿ ಬೃಹತ್​ ಸಮಾವೇಶವನ್ನು ನಡೆಸಲಿದ್ದಾರೆ. ಈ ಬಹಿರಂಗ ಬೃಹತ್ ಸಮಾವೇಶದಲ್ಲಿ ರಾಜಕೀಯ ನಾಯಕರು, ಸಿನಿಮಾ ಸ್ಟಾರ್​ಗಳು ಸುಮಲತಾ ಅವರಿಗೆ ಸಾಥ್​ ನೀಡಲಿದ್ದಾರೆ. ಕ್ಷೇತ್ರದ ಮತದಾರರು ಸಮಾವೇಶದಲ್ಲಿ ಪಾಲ್ಗೊಂಡು ಬೆಂಬಲ ನೀಡಲಿದ್ದಾರೆ. ಸಮಾವೇಶ ಉದ್ದೇಶಿಸಿ ಸುಮಲತಾ ಮಾತನಾಡಲಿದ್ದಾರೆ.
ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ, ಮಂಡ್ಯದ ಅಧ್ಯಕ್ಷರಾದ ಬೇಲೂರು ಸೋಮಶೇಖರ್ ಅವರು ಅನುಮತಿ ಕೋರಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಅನುಮತಿ ದೊರೆತಿದೆ. ಮಧ್ಯಾಹ್ನ 1.30ರಿಂದ ಸಂಜೆ 6.30ರವರೆಗೆ ಸಮಾವೇಶಕ್ಕೆ ಅನುಮತಿ ಸಿಕ್ಕಿದೆ.

RELATED ARTICLES

Related Articles

TRENDING ARTICLES